ನವದೆಹಲಿ: ದೆಹಲಿಯ ಅಬಕಾರಿ ಹಗರಣದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತನಿಖಾ ಸಂಸ್ಥೆಗಳಾದ ಸಿಬಿಐ, ಹಾಗೂ ಜಾರಿ ನಿರ್ದೇಶನಾಲಯ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿವೆ. ತನ್ನ ಅಧೀನ ವ್ಯಕ್ತಿಗಳ ಮೂಲಕ ಅಪರಾಧ ಎಸಗಿದ ಮತ್ತು ಅಕ್ರಮ ಹಣ ಕಾಯ್ದೆ ವರ್ಗಾವಣೆ ಕಾಯ್ದೆಯಡಿ ಪಕ್ಷವನ್ನೂ ಆರೋಪಿಯಾಗಿ ಪರಿಗಣಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ತನಿಖಾ ಸಂಸ್ಥೆಗಳು ಮಾಹಿತಿ ನೀಡಿವೆ. ಹಗರಣದಲ್ಲಿ ಆಪ್ ಪಕ್ಷದ ಹಲವು ಆರೋಪಿಗಳು ಭಾಗಿಯಾಗಿದ್ದು, ಪಕ್ಷವೇ ಇದರಲ್ಲಿ ಆರೋಪಿಯೇ ಎಂಬ ಕುರಿತಾಗಿ ತನಿಖಾ ಸಂಸ್ಥೆಗಳಿಗೆ ಈ ಹಿಂದೆ ಸುಪ್ರೀಂ ಪ್ರಶ್ನಿಸಿತ್ತು.