ನವದೆಹಲಿ: ಹಾಲಿ ಲೋಕಸಭೆಯ 514 ಸದಸ್ಯರ ಪೈಕಿ 225 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಇದು ಒಟ್ಟು ಸಂಸದರ ಪೈಕಿ ಶೇ.44ರಷ್ಟು. ಜೊತೆಗೆ ಒಟ್ಟು ಸಂಸದರ ಪೈಕಿ ಶೇ.5ರಷ್ಟು ಜನರು ಶತಕೋಟ್ಯಧಿಪತಿಗಳು ಎಂದು ವರದಿಯೊಂದು ಹಳಿದೆ.
ಉಳಿದಂತೆ ಬಿಜೆಪಿಯ 21 ಸೇರಿ ಒಟ್ಟು 28 ಸಂಸದರು ಕೊಲೆ ಯತ್ನ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು 16 ಸಂಸದರು ಮಹಿಳೆ ಮೇಲೆ ಅಪರಾಧ ಎಸಗಿದ ಪ್ರಕರಣಗಳಿವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮೂವರ ಮೇಲೆ ಅತ್ಯಾಚಾರ ಪ್ರಕರಣಗಳಿವೆ.
ಇನ್ನು ಆಸ್ತಿ ವಿಚಾರಕ್ಕೆ ಬರುವುದಾದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಶ್ರೀಮಂತ ಸಂಸದರಿದ್ದಾರೆ. ಇದರ ಜೊತೆಗೆ ಇತರೆ ಪಕ್ಷಗಳಲ್ಲಿಯೂ ಶ್ರೀಮಂತರಿದ್ದಾರೆ. ಶ್ರೀಮಂತ ಸಂಸದರ ಪೈಕಿ ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ನಕುಲ್ ನಾಥ್, ಕರ್ನಾಟಕದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಸ್ವತಂತ್ರ ಸಂಸದ ಕನುಮುರು ರಘುರಾಮ ಕೃಷಣ ರಾಜು ಅಗ್ರ 3 ಸ್ಥಾನ ಪಡೆದುಕೊಂಡಿದ್ದಾರೆ.ಸಂಸದರ ಶೈಕ್ಷಣಿಕ ವಿಚಾರಕ್ಕೆ ಬಂದರೆ ಶೇ.73 ಸದಸ್ಯರು ಪದವಿ ಹಾಗೂ ಉನ್ನತ ಶಿಕ್ಷಣ ಪೂರೈಸಿದ್ದಾರೆ.