ಮತ್ತೆ ‘ರಾಯಣ್ಣ ಬ್ರಿಗೇಡ್‌’ ಕಟ್ಟಲು ಚಿಂತನೆ: ಈಶ್ವರಪ್ಪ

ಸಾರಾಂಶ

ಲೋಕಸಭಾ ಚುನಾವಣೆ ಮುಗಿದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಕುರಿತು ತೀರ್ಮಾನಿಸುವೆ ಎಂದು ಮಾಜಿ ಡಿಸಿಎಂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬಾಗಲಕೋಟೆ ;  ಲೋಕಸಭಾ ಚುನಾವಣೆ ಮುಗಿದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಕುರಿತು ತೀರ್ಮಾನಿಸುವೆ ಎಂದು ಮಾಜಿ ಡಿಸಿಎಂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕರು ರಾಯಣ್ಣ ಬ್ರಿಗೇಡ್ ಮಾಡ್ಬೇಕು ಅಂತಿದ್ದಾರೆ. ಹಿಂದುಳಿದವರು, ದಲಿತರು ಎಲ್ಲಾ ಸಮಾಜದವರನ್ನು ಸೇರಿಸಬೇಕು ಅಂತಿದ್ದಾರೆ. ರಾಜ್ಯದಲ್ಲಿ ಹಿಂದುಳಿದವರು, ಕುರುಬರಿಗೆ ಅನ್ಯಾಯ ಆಗಿದೆ ಎಂದು ಸಾಕಷ್ಟು ಜನ ಹೇಳ್ತಿದ್ದಾರೆ. ಏನು ಮಾಡಬೇಕು ಅಂತ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲ್ಲ. ಚುನಾವಣೆಗೆ ನಿಲ್ಲಬೇಕಾದರೂ ನಾನೊಬ್ಬನೇ ನಿರ್ಧಾರ ತಗೊಂಡಿದ್ದಲ್ಲ. ಜನರಿಂದ ಅಭಿಪ್ರಾಯ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಏನೇನು ಪರಿವರ್ತನೆ ಆಗುತ್ತೆ ನೋಡಿ ಎಂದರು.

ಈಗ ದಲಿತರನ್ನೂ ಸೇರಿಸಲು ಬೇಡಿಕೆ

ಹಿಂದುಳಿದವರು, ದಲಿತರು ಎಲ್ಲಾ ಸಮಾಜದವರನ್ನು ಸೇರಿಸಿ ರಾಯಣ್ಣ ಬ್ರಿಗೇಡ್‌ ಮಾಡಬೇಕು ಎಂದು ಜನರು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಹಿಂದುಳಿದವರು, ಕುರುಬರಿಗೆ ಅನ್ಯಾಯ ಆಗಿದೆ ಎಂದು ಅವರು ದೂರುತ್ತಿದ್ದಾರೆ.

- ಕೆ.ಎಸ್‌.ಈಶ್ವರಪ್ಪ -  ಮಾಜಿ ಉಪಮುಖ್ಯಮಂತ್ರಿ

Share this article