ಇಂದು ಯತ್ನಾಳ್‌ ಟೀಂ ವಕ್ಫ್‌ ಹೋರಾಟ 2.0 - ಕಂಪ್ಲಿಯಲ್ಲಿ ಬಿಜೆಪಿ ಭಿನ್ನರ ಬೃಹತ್ ಸಮಾವೇಶ

Published : Jan 04, 2025, 08:52 AM IST
ramesh jarkiholi, mla yatnal

ಸಾರಾಂಶ

ಬಿಜೆಪಿಯ ಭಿನ್ನರ ಗುಂಪು ಆರಂಭಿಸಿರುವ ವಕ್ಫ ವಿರೋಧಿ ಹೋರಾಟದ ಎರಡನೇ ಹಂತ ಶನಿವಾರ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಆರಂಭವಾಗಲಿದ್ದು, ‘ವಕ್ಫ್‌ ಹಠಾವೋ ಜನಜಾಗೃತಿ ಸಮಾವೇಶ’ ನಡೆಸಲು ವೇದಿಕೆ ಸಿದ್ಧಗೊಂಡಿದೆ.

ಬಳ್ಳಾರಿ : ಬಿಜೆಪಿಯ ಭಿನ್ನರ ಗುಂಪು ಆರಂಭಿಸಿರುವ ವಕ್ಫ ವಿರೋಧಿ ಹೋರಾಟದ ಎರಡನೇ ಹಂತ ಶನಿವಾರ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಆರಂಭವಾಗಲಿದ್ದು, ‘ವಕ್ಫ್‌ ಹಠಾವೋ ಜನಜಾಗೃತಿ ಸಮಾವೇಶ’ ನಡೆಸಲು ವೇದಿಕೆ ಸಿದ್ಧಗೊಂಡಿದೆ.

ಭಿನ್ನರಿಗೆ ಹೋರಾಟ ನಡೆಸದಂತೆ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎನ್ನಲಾಗುತ್ತಿದೆಯಾದರೂ, ಇದನ್ನು ಧಿಕ್ಕರಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್, ಮತ್ತವರ ತಂಡ 2ನೇ ಹಂತದ ಹೋರಾಟಕ್ಕೆ ಮುಂದಾಗಿದೆ. ಮೊದಲ ಹಂತದ ಹೋರಾಟ ಬೆಳಗಾವಿಯಲ್ಲಿ ಅಂತ್ಯಗೊಂಡಿತ್ತು.

ಯತ್ನಾಳ್ ಅಲ್ಲದೆ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್, ಮಾಜಿ ಸಂಸದರಾದ ಬಿ.ವಿ.ನಾಯಕ್, ಪ್ರತಾಪ್‌ಸಿಂಹ ಸೇರಿ ಅನೇಕ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆಂದು ಹೇಳಲಾಗಿದೆ.

ಕಂಪ್ಲಿ ಪಟ್ಟಣದ ಶಾರದಾ ವಿದ್ಯಾಶಾಲೆ ಮೈದಾನದಲ್ಲಿ ಕಂಪ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಸಮಾವೇಶ ಆಯೋಜನೆಗೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೊಸ ವರ್ಷದ ಮೊದಲ ದಿನವೇ ಹಠಾತ್ ದೆಹಲಿಗೆ ಭೇಟಿ ನೀಡಿ ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಭಿನ್ನರ ವಿರುದ್ಧ ದೂರು ನೀಡಿದ್ದಾರೆನ್ನಲಾಗುತ್ತಿದ್ದು, ಹೀಗಿದ್ದರೂ ಬಿಜೆಪಿ ಭಿನ್ನರ ಗುಂಪು ಪೂರ್ವ ನಿಗದಿಯಂತೆ ಸಮಾವೇಶ ನಡೆಸಲು ಮುಂದಾಗಿರುವುದು ಗಮನಾರ್ಹ ಅಂಶವಾಗಿದೆ.

ಬಜೆಟ್‌ ಸೆಷನ್‌ನಲ್ಲೂ ವಕ್ಫ್‌ ಜೆಪಿಸಿ ವರದಿ ಸಲ್ಲಿಕೆ ಅನುಮಾನ

ನವದೆಹಲಿ: ವಕ್ಫ್‌ ಕಾಯ್ದೆ ತಿದ್ದುಪಡಿಗೆ ರಚಿಸಿರುವ ಸಂಸತ್ತಿನ ಜಂಟಿ ಸದನ ಸಮಿತಿ, ಇನ್ನೂ ತನ್ನ ಕೆಲಸ ಪೂರ್ಣಗೊಳಿಸದ ಕಾರಣ ಮುಂಬರುವ ಬಜೆಟ್‌ ಅಧಿವೇಶನದಲ್ಲಿ ವಕ್ಫ್‌ ಕಾಯ್ದೆ ಮಂಡನೆ ಆಗುವುದು ಬಹುತೇಕ ಅನುಮಾನ ಎನ್ನಲಾಗಿದೆ, 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ