ಮೋದಿ ನೇತೃತ್ವದಲ್ಲಿ ದೇಶ ಸುಭದ್ರ : ಶೋಭಾ

KannadaprabhaNewsNetwork |  
Published : Apr 09, 2024, 01:46 AM ISTUpdated : Apr 09, 2024, 03:27 AM IST
ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟೆಯಲ್ಲಿ ಬಿಜೆಪಿ-ಜೆಡಿಎಸ್‌ ಚುನಾವಣಾ ಕಚೇರಿಯನ್ನು ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಶಾಸಕ ಎಸ್‌.ಮುನಿರಾಜು, ಅಂದಾನಪ್ಪ, ಎಂ.ಮುನಿಸ್ವಾಮಿ, ನೆ.ಲ.ನರೇಂದ್ರಬಾಬು, ಹರೀಶ್‌ ಇದ್ದರು. | Kannada Prabha

ಸಾರಾಂಶ

ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸುಭದ್ರವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಭದ್ರತೆ ಹಾಗೂ ಗಡಿಗಳ ರಕ್ಷಣೆಗಾಗಿ ಮೋದಿಯವರು ದುಡಿದಿದ್ದಾರೆ ಎಂದು ಉತ್ತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

ಪೀಣ್ಯ ದಾಸರಹಳ್ಳಿ: ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸುಭದ್ರವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಭದ್ರತೆ ಹಾಗೂ ಗಡಿಗಳ ರಕ್ಷಣೆಗಾಗಿ ಮೋದಿಯವರು ದುಡಿದಿದ್ದಾರೆ ಎಂದು ಉತ್ತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಬಾಗಲಗುಂಟೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಚುನಾವಣಾ ಕಚೇರಿ ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಕ್ತಿಯಿಂದ ಮತ್ತೊಮ್ಮೆ ಮೋದಿಯವರಿಗೆ ಬೆಂಬಲ ಸಿಗಬೇಕು. ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ದೇಶದ ಅಭಿವೃದ್ಧಿ ಮತ್ತು ಮೋದಿಜಿ ಅವರ ಸಾಧನೆಯ ತಿಳಿಸಬೇಕು ಎಂದರು.

ಶಾಸಕ ಎಸ್.ಮುನಿರಾಜು ಮಾತನಾಡಿ, ಎನ್‌ಡಿಎ ಮೈತ್ರಿ ಕೂಟದಲ್ಲಿ ಭಾಗಿಯಾಗುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ಕಾರ್ಯಕ್ಕೆ ಜೆಡಿಎಸ್ ಹಾಗೂ ಬಿಜಿಪಿ ಮುಖಂಡರು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ದೇವೇಗೌಡರ ನೆರಳಿನಲ್ಲಿ ಬೆಳೆದ ಸಿದ್ದರಾಮಯ್ಯ ಇಂದು ಅವರನ್ನೇ ಏಕವಚನದಲ್ಲಿ ಮಾತಾನಾಡುತ್ತಾರೆ. ಅಂತಹವರಿಗೆ ನಾವು ನೀವು ತಕ್ಕ ಪಾಠ ಕಲಿಸಬೇಕು. ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಪರಿವರ್ತನೆಯಾಗಿದೆ. ಅದಕೋಸ್ಕರ ದೇವೇಗೌಡರು ಎನ್‌ಡಿಎ ಜೊತೆ ಕೈಜೋಡಿಸಿ ದೇಶದಲ್ಲಿ ಕಾಂಗ್ರೆಸ್ ಕಿತ್ತೊಗೆರಯರಿ ಎಂಬ ಸಂದೇಶ ನೀಡಿದ್ದಾರೆ. ಬಿಟ್ಟಿ ಭಾಗ್ಯಗಳಿಗೋಸ್ಕರ 1ಲಕ್ಷದ 3ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯವನ್ನು ಸಾಲಗಾರರನ್ನಾಗಿ ಮಾಡಿ ಅದೋಗತಿಗೆ ತಂದಿದ್ದಾರೆ. ನಿಮಗೆ ಧೈರ್ಯವಿದ್ದರೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ. 40 ಸ್ಥಾನಗಳು ಸಿಗದಂತಹ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಕಿಡಿಕಾರಿದರು.

ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಂದಾನಪ್ಪ, ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ.ಮುನಿಸ್ವಾಮಿ, ನೆ.ಲ.ನರೇಂದ್ರ ಬಾಬು, ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್, ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಬಿ.ಸುರೇಶ್, ಬಿಜೆಪಿ ಮುಖಂಡರಾದ ಟಿ.ಎಸ್.ಗಂಗರಾಜು, ಪಿ.ಎಚ್.ರಾಜು, ಬಿ.ಎಂ.ನಾರಾಯಣ್, ಕೃಷ್ಣಮೂರ್ತಿ, ಭರತ್ ಸೌಂದರ್ಯ, ನಾಗಣ್ಣ, ಬಿ.ಟಿ.ಶ್ರೀನಿವಾಸ್, ನಿಸರ್ಗ ಕೆಂಪರಾಜು, ಪಾಂಡುರಂಗ ರಾವ್, ಟಿ.ಶಿವಕುಮಾರ್ ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ