ನಿಮ್ಮ ಜತೆ ನಾವಿದ್ದೇವೆ, ಧೈರ್‍ಯವಾಗಿ ಹೋರಾಡಿ : ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಫೋನ್‌

Published : Sep 26, 2024, 04:24 AM IST
Rahul Gandhi Siddaramaiah

ಸಾರಾಂಶ

ರಾಜಕೀಯದಲ್ಲಿ ಇಂತಹ ಷಡ್ಯಂತ್ರ ಹಾಗೂ ಸವಾಲುಗಳು ಸಹಜ. ಸಮರ್ಥವಾಗಿ ಎದುರಿಸಿ ಹೊರಬನ್ನಿ. ಹೈಕಮಾಂಡ್‌ ನಿಮ್ಮ ಜತೆಯಿದೆ’ ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

ಬೆಂಗಳೂರು : ‘ರಾಜಕೀಯದಲ್ಲಿ ಇಂತಹ ಷಡ್ಯಂತ್ರ ಹಾಗೂ ಸವಾಲುಗಳು ಸಹಜ. ಸಮರ್ಥವಾಗಿ ಎದುರಿಸಿ ಹೊರಬನ್ನಿ. ಹೈಕಮಾಂಡ್‌ ನಿಮ್ಮ ಜತೆಯಿದೆ’ ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆಗೆ ನಡೆಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರು ದೂರವಾಣಿ ಕರೆ ಮಾಡಿ ಮಾತನಾಡಿದರು ಎನ್ನಲಾಗಿದೆ.

ಈ ವೇಳೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚೆಯಾಗಿದೆ. ಮುಂದಿನ ಕಾನೂನು ಹೋರಾಟ ಏನೇ ಆಗಿದ್ದರೂ ನಿಮ್ಮ ಜತೆ ಹೈಕಮಾಂಡ್‌ ಇರಲಿದೆ. ಧೈರ್ಯವಾಗಿ ಹೋರಾಟ ಮುಂದುವರೆಸಿ. ಸಮರ್ಥವಾಗಿ ನಿಭಾಯಿಸಿ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ