ಮಂಡ್ಯ : ಜನವರಿ ನಂತರ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಮಾಜಿ ಸಂಸದೆ ಸುಮಲತಾ ತಿಳಿಸಿದರು. ಚಾಮಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದೇನೆ. ಹೀಗಾಗಿ ನನಗೆ ಸ್ವಲ್ಪ ರೆಸ್ಟ್ ಬೇಕಿತ್ತು. ಜನವರಿ ಬಳಿಕ ಮಂಡ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುವುದಾಗಿ ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟೆ. ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ಅವಶ್ಯವಿದ್ದಾಗ ನಾಯಕರು ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ನಾನು ಯಾವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಬಿಜೆಪಿಯಲ್ಲಿ ನನ್ನ ಸ್ಥಾನಮಾನದ ಬಗ್ಗೆ ಬೆಂಬಲಿಗರು ಆಸೆ ಪಡೋದರಲ್ಲಿ ತಪ್ಪೇನಿಲ್ಲ ಎಂದರು.
ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು. ಮೈತ್ರಿ ಇದ್ದಾಗ ಪಕ್ಷ ಸಂಘಟನೆ ಒಂದು ಚಾಲೆಂಜ್ ಆಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಹಿಂದಿದೆ. ನನ್ನ ಮುಂದಿನ ರಾಜಕಾರಣ ಮಂಡ್ಯದಲ್ಲಿ ಇರುತ್ತದೆ. ಈ ಬಗ್ಗೆ ಹೈಕಮಾಂಡ್ ಗೆ ತಿಳಿಸಿದ್ದೇನೆ. ಉಪಚುನಾವಣೆ ನಂತರ ಈ ಕಡೆ ಗಮನಹರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯಕ್ಕೆ ಪ್ರಚಾರಕ್ಕೆ ಬಾರದ ವಿಚಾರವಾಗಿ ಯಾರು ಇಂತಹ ಡೇಟ್ ನಲ್ಲಿ ಪ್ರಚಾರಕ್ಕೆ ಬರಬೇಕು ಅಂತಾ ಹೇಳಲಿಲ್ಲ. ನಾನು ಇದನ್ನು ದೊಡ್ಡ ವಿಷಯ ಅಂದುಕೊಂಡಿಲ್ಲ. ಬೇರೆ ಕಡೆ ಪ್ರಚಾರ ಮಾಡಿದ್ದೇನೆ ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಿದ್ದರೆ ನನ್ನನ್ನ ಕರೆಯುತ್ತಿದ್ದರು. ಆದರೆ, ಮೈತ್ರಿ ಅಭ್ಯರ್ಥಿ ಇಗಿರುವುದರಿಂದ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ನೋಡಿ ಕರೆದಿಲ್ಲ ಎನಿಸುತ್ತದೆ. ನಮ್ಮಲ್ಲಿ ಯಾವುದೇ ದ್ವೇಷವಿಲ್ಲ. ಅದು ಹಳೆಯದಾಗಿದೆ ಎಂದರು.
ದರ್ಶನ್ ಆರೋಪಗಳಿಂದ ಮುಕ್ತವಾಗಿ ಹೊರಬರುವ ನಂಬಿಕೆ ಇದೆ: ಸುಮಲತಾ
ಮಂಡ್ಯ: ಎಲ್ಲಾ ಆರೋಪ ಮುಕ್ತವಾಗಿ ನಟ ದರ್ಶನ್ ಹೊರ ಬರುವ ನಂಬಿಕೆ ಇದೆ ಎಂದು ಮಾಜಿ ಸಂಸದೆ ಸುಮಲತಾ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ದರ್ಶನ್ ಗೆ ಸಾಕಷ್ಟು ಸವಾಲುಗಳಿವೆ. ವಕೀಲರು ನಿಜಾಂಶ ಏನು ಅನ್ನೋದನ್ನು ಸಾಬೀತು ಮಾಡುತ್ತಾರೆ ಎಂಬ ಅನ್ನೋ ನಂಬಿಕೆ ಇದೆ. ದರ್ಶನ್ ಗೆ ಎಲ್ಲಾ ಒಳ್ಳೆದಾಯದಾಗಿ ನಿರಾಪರಾಧಿಯಾಗಿ ಹೊರಬೇಕು ಎಂಬ ಆಸೆ ಇದೆ ಎಂದರು.
ದರ್ಶನ್ ಗೆ ಬೆನ್ನು ನೋವು ತುಂಬಾ ಇದೆ. ಆದರೆ, ಅವರಿಗೆ ಸರ್ಜರಿ ಬಗ್ಗೆ ಆಸಕ್ತಿ ಇಲ್ಲ ಎಂಬ ವಿಷಯ ನನ್ನ ಗಮನಕ್ಕೆ ಬಂತು.
ಸರ್ಜರಿ ಆದರೆ, ಸುಧಾರಿಸಿಕೊಳ್ಳು ತುಂಬ ಸಮಯ ಬೇಕಾಗುತ್ತದೆ. ಈಗಾಗಲೇ ದರ್ಶನ್ ಇಲ್ಲದೆ ಸಿನಿಮಾ ಇಂಡಸ್ಟ್ರಿಯಲ್ಲೂ ಸಾಕಷ್ಟು ನಷ್ಟ ಆಗಿದೆ ಎಂದು ಹೇಳಿದರು.
ದರ್ಶನ್ ಬಳಿ ಸೆಕ್ಯುರಿಟಿ ಇದೆ. ಪೋನ್ ಕೂಡ ಉಪಯೋಗಿಸುತ್ತಿಲ್ಲ. ದರ್ಶನ್ ಪತ್ನಿ ಅವರಿಂದ ಅಷ್ಟೇ ಮಾಹಿತಿ ಸಿಕುಗುತ್ತಿದೆ. ಅವರು ಮಾತ್ರ ನನ್ನ ಸಂಪರ್ಕದಲ್ಲಿದ್ದಾರೆ. ಆದರೆ, ದರ್ಶನ್ ನನ್ನ ಸಂಬಂಧ ಹಾಗೆ ಇದೆ. ನನ್ನ ಲೈಫ್ ಇರುವರೆಗೂ ದರ್ಶನ್ ನನ್ನ ಮಗನೆ. ದರ್ಶನ್ ಗೆ ತಾಯಿಯಾಗಿ ನಾನು ಪರ್ಸನಲ್ ಆಗಿ ಹೇಳುತ್ತೇನೆ. ದರ್ಶನ್ ಪರ ನಾನಂತೂ ಸದಾ ಇರುತ್ತೇನೆ ಎಂದು ತಿಳಿಸಿದರು.