ಓಪನ್‌ಹೈಮರ್‌ಗೆ 7 ಆಸ್ಕರ್‌ ಪ್ರಶಸ್ತಿ ಗರಿ!

KannadaprabhaNewsNetwork |  
Published : Mar 12, 2024, 02:10 AM ISTUpdated : Mar 12, 2024, 08:11 AM IST
ರಾಬರ್ಟ್‌  | Kannada Prabha

ಸಾರಾಂಶ

ಪರಮಾಣು ಬಾಂಬ್‌ ಜನಕರ ಪೈಕಿ ಒಬ್ಬರಾದ ರಾಬರ್ಟ್ ಓಪನ್‌ಹೈಮನ್‌ ಜೀವನ ಚರಿತ್ರೆ ಆಧರಿಸಿದ ಓಪನ್‌ಹೈಮನ್‌ ಇಂಗ್ಲಿಷ್‌ ಚಿತ್ರ ಪ್ರಸಕ್ತ ಸಾಲಿನ ಆಸ್ಕರ್ ಪುರಸ್ಕಾರದಲ್ಲಿ ಒಟ್ಟು 7 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದೆ.

ಲಾಸ್‌ ಏಂಜಲೀಸ್‌: ಪರಮಾಣು ಬಾಂಬ್‌ ಜನಕರ ಪೈಕಿ ಒಬ್ಬರಾದ ರಾಬರ್ಟ್ ಓಪನ್‌ಹೈಮನ್‌ ಜೀವನ ಚರಿತ್ರೆ ಆಧರಿಸಿದ ಓಪನ್‌ಹೈಮನ್‌ ಇಂಗ್ಲಿಷ್‌ ಚಿತ್ರ ಪ್ರಸಕ್ತ ಸಾಲಿನ ಆಸ್ಕರ್ ಪುರಸ್ಕಾರದಲ್ಲಿ ಒಟ್ಟು 7 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದೆ. ಒಟ್ಟು 13 ವಿಭಾಗಗಳಲ್ಲಿ ಚಿತ್ರ ಪ್ರಶಸ್ತಿಗೆ ನಾಮಾಂಕನಗೊಂಡಿತ್ತು.

ಓಪನ್‌ಹೈಮರ್‌ ಅತ್ಯುತ್ತಮ ಚಿತ್ರ, ಓಪನ್‌ಹೈಮನರ್‌ಗಾಗಿ ಕ್ರಿಸ್ಟೋಫರ್‌ ನೋಲನ್‌ ಅತ್ಯುತ್ತಮ ನಿರ್ದೇಶಕ, ಇದೇ ಚಿತ್ರದ ಸಿಲಿಯನ್‌ ಮರ್ಫಿ ಅತ್ಯುತ್ತಮ ನಟ, ರಾಬರ್ಟ್‌ ಡೌನಿ ಜ್ಯೂನಿಯರ್‌ ಅತ್ಯುತ್ತಮ ಸಹಾಯಕ ನಟ, ಹೊಯ್ಟೆ ವ್ಯಾನ್‌ ಹೊಯ್ಟೇಮಾಗೆ ಅತ್ಯುತ್ತಮ ಸಿನಿಮಟೋಗ್ರಾಫಿ, ಜೆನ್ನಿಫರ್‌ ಲೇಮ್‌ಗೆ ಅತ್ಯುತ್ತಮ ಸಂಕಲನ ಪ್ರಶಸ್ತಿ ಬಂದಿವೆ. 

ಇನ್ನು ‘ಪೂರ್‌ ಥಿಂಗ್ಸ್‌’ ಚಿತ್ರದ ನಟನೆಗಾಗಿ ಎಮ್ಮಾ ಸ್ಟೋನ್‌ ಅತ್ಯುತ್ತಮ ಪ್ರಶಸ್ತಿಗೆ ಪಾತ್ರರಾದರು. 2017ರಲ್ಲಿ ಲಾ ಲಾ ಲ್ಯಾಂಡ್‌ ಚಿತ್ರಕ್ಕಾಗಿ ಕೂಡಾ ಎಮ್ಮಾಸ್ಟೋನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿತ್ತು.

ಬ್ರಿಟನ್‌ನ ಜೋನಾಥನ್‌ ಗ್ಲೇಝರ್‌ ಅವರ ದ ಜೋನ್‌ ಆಫ್‌ ಇಂಟ್ರೆಸ್ಟ್‌ ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. ಭಾರತದ ಯಾವುದೇ ಚಿತ್ರ ಅಥವಾ ನಟರು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಲಿಲ್ಲ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಚೀನಾದಲ್ಲಿ 700 ಕಿ.ಮೀ ವೇಗದ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ