ಭಾರತದ 16ರ ಪೋರಿ ಪುಟ್ಟಸಂಸ್ಥೆಗೆ ಬಿಲಿಯನೇರ್‌ ಹಿರಿಮೆ

KannadaprabhaNewsNetwork |  
Published : Oct 12, 2023, 12:01 AM ISTUpdated : Oct 12, 2023, 10:25 AM IST
Tech

ಸಾರಾಂಶ

ಭಾರತ ಮೂಲದ ಪೋರಿ ಪ್ರಾಂಜಲಿ ಅವಸ್ಥಿ ತನ್ನ 16ನೇ ವಯಸ್ಸಿನಲ್ಲಿ 3.7 ಕೋಟಿ ರು. ಬಂಡವಾಳದೊಂದಿಗೆ ಪ್ರಾರಂಭಿಸಿದ ಡೆಲ್ವ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸ್ಟಾರ್ಟಪ್‌ ಕಂಪನಿ ಈಗ ವಾರ್ಷಿಕ 100 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುವ ಬೃಹತ್‌ ಸಂಸ್ಥೆಯಾಗಿ ಬೆಳೆದು ನಿಂತಿದೆ.

2 ವರ್ಷದಲ್ಲಿ 100 ಕೋಟಿ ವಹಿವಾಟು ನ್ಯೂಯಾರ್ಕ್‌: ಭಾರತ ಮೂಲದ ಪೋರಿ ಪ್ರಾಂಜಲಿ ಅವಸ್ಥಿ ತನ್ನ 16ನೇ ವಯಸ್ಸಿನಲ್ಲಿ 3.7 ಕೋಟಿ ರು. ಬಂಡವಾಳದೊಂದಿಗೆ ಪ್ರಾರಂಭಿಸಿದ ಡೆಲ್ವ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸ್ಟಾರ್ಟಪ್‌ ಕಂಪನಿ ಈಗ ವಾರ್ಷಿಕ 100 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುವ ಬೃಹತ್‌ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕಂಪನಿಯ ಸಂಸ್ಥಾಪಕಿ ಪ್ರಾಂಜಲಿ, ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನನ್ನ 10ನೇ ವಯಸ್ಸಿನಲ್ಲೇ ಕೋಡಿಂಗ್‌ ಆರಂಭಿಸಿದೆ. ಕೋವಿಡ್‌ ಸಮಯದಲ್ಲಿ ದಿನಕ್ಕೆ 20 ಗಂಟೆಗಳ ಕಾಲ ಕೋಡಿಂಗ್‌ ಕುರಿತು ಇಂಟರ್ನ್‌ಶಿಪ್‌ ಹಾಗೂ ತಂದೆಯ ಸ್ಫೂರ್ತಿಯ ಮಾತುಗಳು ನನಗೆ ಈ ಸಂಸ್ಥೆ ಕಟ್ಟಲು ಸಹಾಯಕವಾಯಿತು. ಈಗ ನನಗೆ 10 ಜನರಿಗೆ ಉದ್ಯೋಗ ನೀಡಿದ ತೃಪ್ತಿಯಿದ್ದು ಇದನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ತವಕದಲ್ಲಿದ್ದೇನೆ’ ಎಂದು ತಿಳಿಸಿದ್ದಾರೆ.

PREV

Recommended Stories

ರಷ್ಯಾದಿಂದ ಭಾರತ ತೈಲ ಖರೀದಿ ಸ್ಥಗಿತ: ಟ್ರಂಪ್‌ ಸ್ವಯಂ ಘೋಷಣೆ
ಟ್ರಂಪ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ ಕೊಡಿ : ಶ್ವೇತ ಭವನ ಕಾರ್ಯದರ್ಶಿ