ಅಮೆಜಾನ್‌ ಕಾಡಲ್ಲಿ 26 ಅಡಿ ಉದ್ದದ ಅನಕೊಂಡಾ ಪತ್ತೆ

KannadaprabhaNewsNetwork |  
Published : Feb 22, 2024, 01:53 AM ISTUpdated : Feb 22, 2024, 11:32 AM IST
ಅನಕೊಂಡಾ | Kannada Prabha

ಸಾರಾಂಶ

ಅಮೆಜಾನ್‌ ಕಾಡಲ್ಲಿ 26 ಅಡಿ ಉದ್ದದ ಸುಮಾರು 200 ಕಿಜಿ ತೂಕವಿರುವ ಅನಕೊಂಡಾ ಪತ್ತೆಯಾಗಿದೆ.

ರಿಯೋ ಡಿ ಜನೈರೋ: ದೂರದರ್ಶನ ಕಾರ್ಯಕ್ರಮವೊಂದರ ಚಿತ್ರೀಕರಣ ವೇಳೆ ಅಮೆರಿಕಾದ ತಜ್ಞರು ಮತ್ತು ಸಾಹಸ ವನ್ಯಜೀವಿ ಛಾಯಾಗ್ರಾಹಕರು ವಿಶ್ವದ ಅತಿದೊಡ್ಡ (ಉದ್ದ ಹಾಗೂ ತೂಕ) ಅನಕೊಂಡಾ ಹಾವನ್ನು ಪತ್ತೆಹಚ್ಚಿದ್ದಾರೆ. 

ನ್ಯಾಷನಲ್‌ ಜಿಯಾಗ್ರಫಿಕ್‌ ಡಿಸ್ಕವರಿ ಚಾನಲ್‌ನಲ್ಲಿ ಪ್ರಸಾರವಾಗುವ ಪೋಲ್‌ ಟು ಪೋಲ್‌ ಕಾರ್ಯಕ್ರಮದ ಚಿತ್ರೀಕರಣದ ವೇಳೆ ವಿಲ್‌ ಸ್ಮಿತ್‌ ಅವರಿಗೆ 26 ಅಡಿ ಉದ್ದದ ಗ್ರೀನ್‌ ಅನಕೊಂಡಾ ತಳಿಯ ಹಾವು ಪತ್ತೆಯಾಗಿದೆ.

ಈ ಹಾವು ಅಪರೂಪವಾದ ಗ್ರೀನ್‌ ಅನಕೊಂಡಾ ತಳಿಗೆ ಸೇರಿದ್ದು, 26 ಅಡಿ ಉದ್ದ ಹಾಗೂ ಸುಮಾರು 200 ಕೆಜಿ (440 ಪೌಂಡ್‌) ತೂಕವಿದೆ. 

ಇದರ ತಲೆಯ ಭಾಗವು ಮಾನವನ ತಲೆಯಷ್ಟೇ ಬೃಹತ್‌ ಗಾತ್ರ ಹೊಂದಿದ್ದು, ಇವು ತಮ್ಮ ಬೇಟೆಗಳಿಗಿಂತ ವೇಗವಾಗಿ ಚಲಿಸುವ ಸಾಮರ್ಥ್ಯವುಳ್ಳವಾಗಿವೆ.

PREV

Recommended Stories

ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!
ನಾವು ಯುದ್ಧ ಮಾಡಲ್ಲ : ಟ್ರಂಪ್‌ ತೆರಿಗೆ ದಾಳಿಗೆ ಚೀನಾದ ತಿರುಗೇಟು