ನೇಪಾಳ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ

Published : Aug 28, 2026, 11:46 AM IST
nepal

ಸಾರಾಂಶ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆಯಾಗಿದ್ದಾರೆ. ತಮಿಳುನಾಡಿನ 21 ಸೇರಿ 52 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.

ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆಯಾಗಿದ್ದಾರೆ. ತಮಿಳುನಾಡಿನ 21 ಸೇರಿ 52 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.

ಕಣ್ಮರೆಯಾಗಿರುವ 288 ಭಾರತೀಯರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ

‘ಕಣ್ಮರೆಯಾಗಿರುವ 288 ಭಾರತೀಯರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇವರಲ್ಲಿ ತ್ರಿಶೂಲಿ ಒನ್ ವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 73 ಭಾರತೀಯರೂ ಸೇರಿದ್ದಾರೆ. ಈ ವ್ಯಕ್ತಿಗಳ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಕಾಠ್ಮಂಡುವಿನಲ್ಲಿರುವ ನಮ್ಮ ರಾಯಭಾರ ಕಚೇರಿಯು ಯೋಜನೆಯ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದೆ. ಟಿಬೆಟ್‌ನಲ್ಲಿರುವ ಸುಮಾರು 200 ಭಾರತೀಯರು ಭಾರತ ಸರ್ಕಾರಕ್ಕೆ ನೆರವು ಕೋರಿದ್ದಾರೆ’ ಎಂದು ವಿದೇಶಾಂಗ ವಕ್ತಾರ ರಣಧೀರ್‌ ಜೈಸ್ವಾಲ್‌ ಮಾಹಿತಿ ನೀಡಿದ್ದಾರೆ.

ಕಣ್ಮರೆಯಾದವರ ವಿವರಕ್ಕೆ ಆದೇಶ:

ಈ ನಡುವೆ, ಪ್ರವಾಹದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ಹೆಸರು ಹಾಗೂ ಅವರ ಕುಟುಂಬಸ್ಥರ ಸಂಪರ್ಕ ಸಂಖ್ಯೆಯ ವಿವರಗಳನ್ನು ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ. ವಿದೇಶಾಂಗ ಸಚಿವಾಲಯವು ಸಂತ್ರಸ್ತರ ಕುಟುಂಬದ ಜತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದು, ಈ ವಿವರಗಳು ಅದಕ್ಕೆ ನೆರವಾಗಲಿವೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

3 ದಶಕದ ಭೀಕರ ಪ್ರವಾಹಕ್ಕೆ ಪುಟ್ಟ ದೇಶ ತತ್ತರ
2000 ಅಡಿ ಅಗಲದ ಹಿಮಬಂಡೆ 4000 ಅಡಿ ಕಣಿವೆಗೆ ಬಿದ್ದು ಪ್ರವಾಹ