ಬಾಂಗ್ಲಾದಲ್ಲಿ ನಿಲ್ಲದ ಹಿಂದೂ ಹತ್ಯೆ

KannadaprabhaNewsNetwork |  
Published : Jan 07, 2026, 03:30 AM ISTUpdated : Jan 07, 2026, 04:19 AM IST
 bangladesh

ಸಾರಾಂಶ

 ಬಾಂಗ್ಲಾದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿ ನಡೆಯುತ್ತಿರುವ ದೌರ್ಜನ್ಯಗಳ ಸರಣಿ ಮುಂದುವರೆದಿದೆ. ಒಂದೆಡೆ ಚುನಾವಣೆಗೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದ ಹಿಂದೂ ವ್ಯಕ್ತಿ ನಾಮಪತ್ರ ತಿರಸ್ಕೃತಗೊಳಿಸಲಾಗಿದ್ದರೆ, ಮತ್ತೊಂದು ಕಡೆ ಹಿಂದೂ ಮಹಿಳಾ ಜಿಲ್ಲಾಧಿಕಾರಿಗೆ ಮುಸ್ಲಿಂ ಸಂಘಟನೆಗಳು ಬೆದರಿಕೆ ಹಾಕಿವೆ.

ಢಾಕಾ: ನೆರೆ ರಾಷ್ಟ್ರ ಬಾಂಗ್ಲಾದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿ ನಡೆಯುತ್ತಿರುವ ದೌರ್ಜನ್ಯಗಳ ಸರಣಿ ಮುಂದುವರೆದಿದೆ. ಒಂದೆಡೆ ಚುನಾವಣೆಗೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದ ಹಿಂದೂ ವ್ಯಕ್ತಿ ನಾಮಪತ್ರ ತಿರಸ್ಕೃತಗೊಳಿಸಲಾಗಿದ್ದರೆ, ಮತ್ತೊಂದು ಕಡೆ ಹಿಂದೂ ಮಹಿಳಾ ಜಿಲ್ಲಾಧಿಕಾರಿಗೆ ಮುಸ್ಲಿಂ ಸಂಘಟನೆಗಳು ಬೆದರಿಕೆ ಹಾಕಿವೆ.

ಫೆ.12ರಂದು ಬಾಂಗ್ಲಾದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ

ಫೆ.12ರಂದು ಬಾಂಗ್ಲಾದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಈ ಹಿಂದೆ ಶೇಖ್‌ ಹಸೀನಾ ಸ್ಪರ್ಧಿಸಿದ್ದ ಗೋಪಲ್‌ಗಂಜ್‌-2 ಕ್ಷೇತ್ರದಿಂದ ಸ್ಪರ್ಧಿಸಲು ಜತಿಯಾ ಹಿಂದೂ ಮಹಾಜೋತ್‌ ಎನ್ನುವ ಹಿಂದೂ ಸಂಘಟನೆ ಪ್ರಧಾನ ಕಾರ್ಯದರ್ಶಿ ಗೋವಿಂದ್‌ ಚಂದ್ರ ಪ್ರಾಮಾಣಿಕ್‌ ಎನ್ನುವವರು ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣಾ ಆಯೋಗ ಕೊನೆ ಕ್ಷಣದಲ್ಲಿ ಪ್ರಮಾಣಿಕ್‌ ಅವರು ನಾಮಪತ್ರದಲ್ಲಿ ಸಲ್ಲಿಸಿರುವ ಮತದಾರರ ಸಹಿ ಅಮಾನ್ಯವೆಂದು ಉಮೇದುವಾರಿಕೆ ರದ್ದುಗೊಳಿಸಿದೆ.

ಮತ್ತೊಂದು ಘಟನೆಯಲ್ಲಿ ಕುರಿಗ್ರಾಮ್‌ - ಇ ಕ್ಷೇತ್ರದಲ್ಲಿ ಜಮಾತೆ-ಇ-ಇಸ್ಲಾಮಿ ಅಭ್ಯರ್ಥಿಯ ನಾಮಪತ್ರವನ್ನು ದ್ವಿಪೌರತ್ವ ಕಾರಣದಿಂದ ತಿರಸ್ಕರಿಸಿದ್ದಕ್ಕೆ ಹಿಂದೂ ಮಹಿಳಾ ಜಿಲ್ಲಾಧಿಕಾರಿ ಅನ್ನಪೂರ್ಣಾ ದೇಬ್ನಾಥ್ ಅವರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಇಸ್ಲಾಮಿಕ್ ಪಕ್ಷದವರು ಡೀಸಿಗೆ ಕೋಮು ನಿಂದನೆ ಮಾಡಿ, ರಾಜೀನಾಮೆಗೆ ಆಗ್ರಹಿಸಿದ್ದಾರೆ.

ರಾಜಕೀಯ ದ್ವೇಷಕ್ಕೆ ಹದಿ ಹತ್ಯೆ: ಚಾರ್ಜ್‌ಶೀಟ್‌ನಲ್ಲಿ 17 ಮಂದಿ ಹೆಸರು ಉಲ್ಲೇಖ

ಢಾಕಾ: ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಹತ್ಯೆಯಾದ ಜೆನ್‌ ಝೀ ನಾಯಕ ಉಸ್ಮಾನ್‌ ಹದಿ ಸಾವಿಗೆ ರಾಜಕೀಯ ದ್ವೇಷವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ನಲ್ಲಿ 17 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. ಬುಧವಾರ ಪೊಲೀಸರು ನ್ಯಾಯಾಲಕ್ಕೆ ಅರೋಪ ಪಟ್ಟಿ ಸಲ್ಲಿಸಲಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ‘ಹದಿ ರ್‍ಯಾಲಿ, ಕಾರ್ಯಕ್ರಮಗಳಲ್ಲಿ ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಮತ್ತು ಅದರ ವಿದ್ಯಾರ್ಥಿ ಸಂಘಟನೆ ಛಾತ್ರಾ ಲೀಗ್‌ ಅನ್ನು ಟೀಕಿಸುತ್ತಿದ್ದರು. ಅವರ ರಾಜಕೀಯ ನಿಲುವುಗಳು, ಹೇಳಿಕೆಗಳನ್ನು ಗಮನಿಸಿ ಸೇಡಿನ ಕಾರಣದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ’ ಎಂದಿದ್ದಾರೆ. ಛಾತ್ರಾ ಲೀಗ್‌ನ ಫೈಸಲ್ ಕರೀಮ್ ಮಸೂದ್ ಶಂಕಿತ ಶೂಟರ್‌ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 12 ಮಂದಿ ಬಂಧನವಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

‘ಮೇಡ್‌ ಇನ್‌ ಚೀನಾ’ ಅಸ್ತ್ರಗಳು ಈಗ ವೆನಿಜುವೆಲಾದಲ್ಲೂ ಫೇಲ್‌!
ನಮ್ಮ ಯುದ್ಧ ವಿಮಾನಕ್ಕೆ ಭಾರೀ ಡಿಮ್ಯಾಂಡ್‌, ಸಾಲ ಬೇಡ : ಪಾಕ್‌