ಶೇಖ್‌ ಹಸೀನಾ ಪದಚ್ಯುತಿ ಬಳಿಕ ಜಾತ್ಯತೀತ ಕೈ ಬಿಟ್ಟು ಇಸ್ಲಾಮಿಕ್‌ ದೇಶ ಆಗಲು ಬಾಂಗ್ಲಾದೇಶ ಸರ್ಕಾರ ಯತ್ನ!

KannadaprabhaNewsNetwork |  
Published : Nov 15, 2024, 12:35 AM ISTUpdated : Nov 15, 2024, 04:07 AM IST
ಮೊಹಮದ್‌ ಯ್ಯೂನಸ್‌ | Kannada Prabha

ಸಾರಾಂಶ

ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ ಹಿಂದೂಗಳ ಮೇಲಿನ ದಾಳಿ, ದೇಗುಲಗಳ ಮೇಲಿನ ದಾಳಿಯ ಮೂಲಕ ಸುದ್ದಿಯಲ್ಲಿರುವ ನೆರೆಯ ಬಾಂಗ್ಲಾದೇಶ ಇದೀಗ ಇಸ್ಲಾಮಿಕ್‌ ದೇಶವಾಗಿ ಬದಲಾಗುವತ್ತ ಹೆಜ್ಜೆ ಇಟ್ಟಿರುವ ಸುಳಿವು ನೀಡಿದೆ.

ಢಾಕಾ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿ ಬಳಿಕ ಹಿಂದೂಗಳ ಮೇಲಿನ ದಾಳಿ, ದೇಗುಲಗಳ ಮೇಲಿನ ದಾಳಿಯ ಮೂಲಕ ಸುದ್ದಿಯಲ್ಲಿರುವ ನೆರೆಯ ಬಾಂಗ್ಲಾದೇಶ ಇದೀಗ ಇಸ್ಲಾಮಿಕ್‌ ದೇಶವಾಗಿ ಬದಲಾಗುವತ್ತ ಹೆಜ್ಜೆ ಇಟ್ಟಿರುವ ಸುಳಿವು ನೀಡಿದೆ. 

ಇಂಥದ್ದೊಂದು ಗುಮಾನಿಗೆ ಪೂರಕವಾಗುವಂತೆ, ದೇಶದ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದ ಪದ ತೆಗೆದುಹಾಕುವಂತೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.ಅಲ್ಲದೆ ವಂಗಬಂಧು’ ಮುಜಿಬುರ್‌ ರೆಹಮಾನ್‌ ಅವರ ‘ರಾಷ್ಟ್ರಪಿತ’ ಪಟ್ಟವನ್ನೂ ತೆಗೆದು ಹಾಕಬೇಕು, ಸಂವಿಧಾನೇತರ ಕ್ರಮಗಳ ಮೂಲಕ ಸರ್ಕಾರ ಬದಲಾವಣೆ ಯತ್ನಗಳಿಗೆ ಗಲ್ಲು ಶಿಕ್ಷೆ ನೀಡಬೇಕು, ಅನಿವಾರ್ಯ ಸಂದರ್ಭದಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವ ಅಂಶಗಳನ್ನು ಸಂವಿಧಾನದಲ್ಲಿ ಮರಳಿ ಸೇರಿಸಬೇಕು ಎಂದು ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಸರ್ಕಾರದ ಇಂಥ ಪ್ರಯತ್ನಗಳ ಬೆನ್ನಲ್ಲೇ ‘ಮೊಹಮ್ಮದ್‌ ಯೂನಸ್‌ ಸರ್ಕಾರ ಇದಕ್ಕೆ ಒಪ್ಪಿ ಬಾಂಗ್ಲಾವನ್ನು ಪಾಕ್‌ನಂತೆಯೇ ‘ಇಸ್ಲಾಮಿಕ್‌ ದೇಶ’ ಎಂದು ಘೋಷಿಸುವ ಸಾಧ್ಯತೆ ಇದೆ. ಏಕೆಂದರೆ ಬಾಂಗ್ಲಾದೇಶ ಈಗ ಜಮಾತ್‌ ಎ ಇಸ್ಲಾಮಿ ಸಂಘಟನೆಯ ಅಣತಿಯಂತೆ ನಡೆಯುತ್ತಿದೆ’ ಎಂದು ಮೂಲಗಳು ಹೇಳಿವೆ.

ಈಗೇಕೆ ಬದಲಾವಣೆ:

ಹಿಂದಿನ ಪ್ರಧಾನಿ ಶೇಖ್‌ ಹಸೀನಾ ಸರ್ಕಾರ ಸಂವಿಧಾನಕ್ಕೆ ಕೆಲವು ತಿದ್ದುಪಡಿಗಳನ್ನು ತಂದು ಜಾತ್ಯತೀತ, ಸಮಾಜವಾದ ಅಂಶಗಳನ್ನು ಸಂವಿಧಾನದ ಮೂಲತತ್ವಗಳಾಗಿ ಸೇರಿಸಿತ್ತು. 

ಮಧ್ಯಂತರ ಸರ್ಕಾರ ರಚನೆ ಅವಕಾಶ ರದ್ದುಪಡಿಸಿತ್ತು. ಜೊತೆಗೆ ಮುಜಿಬುರ್‌ ರೆಹಮಾನ್‌ ಅವರ ‘ರಾಷ್ಟ್ರಪಿತ’ ಪಟ್ಟ ನೀಡಿತ್ತು.ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಇದೀಗ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರದ ಪರವಾಗಿ ಹೇಳಿಕೆ ನೀಡಿರುವ ಅಟಾರ್ನಿ ಜನರಲ್‌ ಮೊಹಮ್ಮದ್‌ ಅಸಝಮಾನ್‌, ‘ದೇಶದ ಶೇ.90ರಷ್ಟು ಜನಸಂಖ್ಯೆ ಮುಸ್ಲಿಮರಿಂದ ತುಂಬಿದೆ. ಹೀಗಾಗಿ ಜಾತ್ಯತೀತ ಎಂಬ ಪದ ನಿರರ್ಥಕ. ಹೀಗಾಗಿ ಸಂವಿಧಾನಕ್ಕೆ ಕೆಲ ಬದಲಾವಣೆಗಳನ್ನು ಮಾಡಿದರೆ, ದೇಶದ ಪ್ರಜಾಪ್ರಭುತ್ವ ಮತ್ತು ಐತಿಹಾಸಿಕ ನೀತಿಗಳು ಸಂವಿಧಾನಕ್ಕೆ ಸರಿಹೊಂದುತ್ತವೆ’ ಎಂದು ವಾದ ಮಂಡಿಸಿದ್ದಾರೆ.

ಅಲ್ಲದೆ ‘ಈ ಹಿಂದೆ ಅಲ್ಲಾನಲ್ಲಿ ನಿರಂತರ ನಂಬಿಕೆ ಮತ್ತು ನಂಬಿಕೆ ಇತ್ತು. ಅದು ಈಗ ಮೊದಲಿನಂತೆಯೇ ಮರುಕಳಿಸಬೇಕು. ‘ದೇಶವು ಎಲ್ಲಾ ಧರ್ಮಗಳ ಆಚರಣೆಯಲ್ಲಿ ಸಮಾನ ಹಕ್ಕುಗಳು ಮತ್ತು ಸಮಾನತೆಯನ್ನು ಖಾತ್ರಿಪಡಿಸುತ್ತದೆ’ ಎಂದು ಆರ್ಟಿಕಲ್ ‘2ಎ‘ನಲ್ಲಿ ಹೇಳಲಾಗಿದೆ. ಆದರೆ ಆರ್ಟಿಕಲ್‌ 9, ‘ಬಂಗಾಳಿ ರಾಷ್ಟ್ರೀಯತೆ’ ಬಗ್ಗೆ ಮಾತನಾಡುತ್ತದೆ. ಇದು ಪರಸ್ಪರ ವಿರುದ್ಧಾರ್ಥಕವಾಗಿವೆ’ ಎಂದರು.

ಅಲ್ಲದೆ, ‘ಮುಜಿಬುರ್ ರೆಹಮಾನ್‌ ಅವರನ್ನು ಸಂವಿಧಾನಲ್ಲಿ ‘ರಾಷ್ಟ್ರಪಿತ’ ಎಂದು ನಮೂದಿಸಿದ್ದು ವಾಕ್‌ ಸ್ವಾತಂತ್ರ್ಯದ ಪ್ರಕಾರ ತಪ್ಪು. ಅವರ ಕೊಡುಗೆಗಳನ್ನು ನಾವು ಗೌರವಿಸೋಣ. ಆದರೆ ಅವರನ್ನು ಹೀಗೇ ಸಂಬೋಧಿಸಬೇಕು ಎಂದು ಸಂವಿಧಾನದಲ್ಲಿ ಹೇಳಿದ್ದು ಬಲವಂತದ ಹೇರಿಕೆ’ ಎಂದು ವಾದಿಸಿದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ