ಲಂಡನ್‌ನ ಲ್ಯಾಂಬೆತ್‌ನಲ್ಲಿ ಬಸವಣ್ಣ ಜಯಂತಿ ಆಚರಣೆ

Published : May 02, 2025, 11:09 AM IST
Basavanna

ಸಾರಾಂಶ

ವಚನಕಾರ ಬಸವಣ್ಣ ಅವರ ಜನ್ಮ ದಿನದ ಅಂಗವಾಗಿ ಲಂಡನ್‌ನ ಲ್ಯಾಂಬೆತ್‌ನಲ್ಲಿ ಬಸವೇಶ್ವರ ಪ್ರತಿಷ್ಠಾನ ಮತ್ತು ಹಿಂದೂಸ್‌ ಫಾರ್‌ ಲೇಬರ್‌ನ ಸಹಭಾಗಿತ್ವದಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು.

ನವದೆಹಲಿ: ವಚನಕಾರ ಬಸವಣ್ಣ ಅವರ ಜನ್ಮ ದಿನದ ಅಂಗವಾಗಿ ಲಂಡನ್‌ನ ಲ್ಯಾಂಬೆತ್‌ನಲ್ಲಿ ಬಸವೇಶ್ವರ ಪ್ರತಿಷ್ಠಾನ ಮತ್ತು ಹಿಂದೂಸ್‌ ಫಾರ್‌ ಲೇಬರ್‌ನ ಸಹಭಾಗಿತ್ವದಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು.

ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಯಲ್ಲಿ ಬಸವಣ್ಣ ಪ್ರತಿಮೆಗೆ ನಮನ ಸಲ್ಲಿಸಲಾಯಿತು. ಇದೇ ವೇಳೆ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೂ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತದ ಹೈಕಮಿಷನರ್‌ ವಿಕ್ರಮ್‌ ದೊರೆಸ್ವಾಮಿ ಭಾಗವಹಿಸಿದ್ದರು. ಈ ವೇಳೆ ಪಹಲ್ಗಾಂ ದಾಳಿಯನ್ನು ಬಲವಾಗಿ ಖಂಡಿಸಲಾಯಿತು.

ಬ್ರಿಟಿಷ್‌ ಸಂಸತ್ತಿನ ಮುಂಭಾಗದಲ್ಲಿರುವ ಬಸವೇಶ್ವರ ಪ್ರತಿಮೆ ಪಕ್ಕದಲ್ಲಿ ಪ್ರಾರ್ಥನಾ ಸಭೆಯಲ್ಲಿ ನಡೆಸಲಾಗಿತ್ತು. ಇದರಲ್ಲಿ ಹಲವು ಗಣ್ಯರು, ನಾಯಕರು ಭಾಗಿಯಾಗಿದ್ದರು. ನಂಬಿಕೆ ಮತ್ತು ಸಮುದಾಯಗಳ ಮಂತ್ರಿ ಬರ್ನ್ಲಿಯ ಲಾರ್ಡ್ ಖಾನ್,ವಲಸೆ ಮತ್ತು ಪೌರತ್ವ ಸಚಿವೆ ಸೀಮಾ ಮಲ್ಹೋತ್ರಾ ಎಂಪಿ,ಸ್ಮೆಥ್ವಿಕ್‌ನ ಸಂಸತ್ ಸದಸ್ಯ ಗುರಿಂದರ್ ಜೋಸನ್ ಎಂಪಿ, ಹೌಸ್ ಆಫ್ ಲಾರ್ಡ್ಸ್ ಸದಸ್ಯ ಲಾರ್ಡ್ ರಸೆಲ್ ರೂಕ್ ಭಾಗವಹಿಸಿದ್ದರು.

ಜೊತೆಗೆ ಬ್ರಿಟಿಷ್ ಭಾರತೀಯ ಮತ್ತು ಹಿಂದೂ ಸಮುದಾಯಗಳ ಪ್ರಮುಖರಾದ ಏಷ್ಯನ್ ವಾಯ್ಸ್ ಸಂಪಾದಕ ಸಿಬಿ ಪಟೇಲ್, ಹಿಂದೂ ವೇದಿಕೆ ಆಫ್ ಬ್ರಿಟನ್ ಅಧ್ಯಕ್ಷೆ ತೃಪ್ತಿ ಪಟೇಲ್, ಯುಕೆ ಹಿಂದೂ ಕೌನ್ಸಿಲ್ ಅಧ್ಯಕ್ಷೆ ಕೃಷ್ಣಾ ಭಾನ್, ನೀಸ್ಡೆನ್ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರ ಪ್ರತಿನಿಧಿ ಕಿರಿತ್ ವಾಡಿಯಾ, ಬ್ರಿಟನ್ ಬ್ರಹ್ಮಕುಮಾರೀಸ್ ಯಮಿನಿ ಪಟೇಲ್, ಬ್ರಿಟನ್‌ನ ಬಸವ ಸಮಿತಿ ಅಭಿಜಿತ್ ಸಾಲಿಮಠ ಭಾಗವಹಿಸಿದ್ದರು.

PREV

Recommended Stories

ಆಯೋಗ, ಮೋದಿಗೆ ನಾನು ಹೆದರುವುದಿಲ್ಲ : ರಾಹುಲ್‌
ಸಿಂದೂರಕ್ಕೆ ಬೆಚ್ಚಿ ಅವಿತಿದ್ದ ಪಾಕ್‌ ಯುದ್ದ ನೌಕೆಗಳು!