ದ. ಕೊರಿಯಾದಲ್ಲಿ ರೊಬೋಟ್‌ ‘ಆತ್ಮಹತ್ಯೆ?’

KannadaprabhaNewsNetwork |  
Published : Jul 06, 2024, 12:59 AM ISTUpdated : Jul 06, 2024, 04:35 AM IST
 ರೊಬೋಟ್‌ | Kannada Prabha

ಸಾರಾಂಶ

ಆಘಾತಕಾರಿ ಘಟನೆಯೊಂದರಲ್ಲಿ, ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ನಿಂದ ನೇಮಕಗೊಂಡ ಸಹಾಯಕ ರೋಬೋಟ್ ಒಂದು ಕಟ್ಟಡದ ಮೇಲಿಂದ ಬಿದ್ದಿದೆ. ನಂತರ ಅದು ಸಂಪೂರ್ಣ ಕೆಟ್ಟು ಸ್ತಬ್ಧವಾಗಿದೆ. ಈ ಘಟನೆಯನ್ನು ‘ದೇಶದ ಮೊದಲ ರೋಬೋಟ್ ಆತ್ಮಹತ್ಯೆ’ ಎಂದು ಕೆಲವು ಮಾಧ್ಯಮಗಳು ಬಣ್ಣಿಸಿವೆ.

ಸೋಲ್‌: ಆಘಾತಕಾರಿ ಘಟನೆಯೊಂದರಲ್ಲಿ, ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ನಿಂದ ನೇಮಕಗೊಂಡ ಸಹಾಯಕ ರೋಬೋಟ್ ಒಂದು ಕಟ್ಟಡದ ಮೇಲಿಂದ ಬಿದ್ದಿದೆ. ನಂತರ ಅದು ಸಂಪೂರ್ಣ ಕೆಟ್ಟು ಸ್ತಬ್ಧವಾಗಿದೆ. ಈ ಘಟನೆಯನ್ನು ‘ದೇಶದ ಮೊದಲ ರೋಬೋಟ್ ಆತ್ಮಹತ್ಯೆ’ ಎಂದು ಕೆಲವು ಮಾಧ್ಯಮಗಳು ಬಣ್ಣಿಸಿವೆ.

ಈ ರೋಬೋಟ್‌ ಅನ್ನು ಕಚೇರಿಯ ಕೆಲಸಗಳಿಗೆ ಸಹಾಯ ಮಾಡಲು, ಅಂದರೆ ಕಡತ ತಂದುಕೊಡಲು ಹಾಗೂ ಇತ್ಯಾದಿ ಕೆಲಸಕ್ಕೆ ನೇಮಿಸಲಾಗಿತ್ತು.

ಆದರೆ ತಜ್ಞರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಇದನ್ನು ಆತ್ಮಹತ್ಯೆ ಎನ್ನಲಾಗದು. ಇದರಲ್ಲಿ ತಾಂತ್ರಿಕ ವೈಫಲ್ಯ ಆಗಿದ್ದು, ಹೀಗಾಗಿ ಕಟ್ಟಡದ ಮೇಲಿಂದ ಬಿದ್ದಿರಬಹುದು’ ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಇದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!