ಮಸ್ಕ್‌ರಿಂದ ಹೊಸ ವಿಡಿಯೋ ಆ್ಯಪ್: ಯೂಟ್ಯೂಬ್‌ಗೆ ಸವಾಲು

KannadaprabhaNewsNetwork |  
Published : Apr 25, 2024, 01:02 AM ISTUpdated : Apr 25, 2024, 04:06 AM IST
ಎಲಾನ್ ಮಸ್ಕ್ | Kannada Prabha

ಸಾರಾಂಶ

ಗೂಗಲ್ ಒಡೆತನದ ಜನಪ್ರಿಯ ಯುಟ್ಯೂಬ್ ಗೆ ಸ್ಪರ್ಧೆ ನೀಡಲು ಎಲಾನ್ ಮಸ್ಕ್ ಒಡೆತನದ ಎಕ್ಸ್ ಕಂಪೆನಿಯು ಟೀವಿ ಅಪ್ಲಿಕೇಶನ್ ತರುವುದಕ್ಕೆ ಸಿದ್ಧವಾಗಿದೆ.

ಕ್ಯಾಲಿಫೋರ್ನಿಯಾ: ಗೂಗಲ್ ಒಡೆತನದ ಜನಪ್ರಿಯ ಯುಟ್ಯೂಬ್ ಗೆ ಸ್ಪರ್ಧೆ ನೀಡಲು ಎಲಾನ್ ಮಸ್ಕ್ ಒಡೆತನದ ಎಕ್ಸ್ ಕಂಪೆನಿಯು ಟೀವಿ ಅಪ್ಲಿಕೇಶನ್ ತರುವುದಕ್ಕೆ ಸಿದ್ಧವಾಗಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಉತ್ತಮ ಕ್ವಾಲಿಟಿ ವಿಡಿಯೋಗಳನ್ನು ಪೋಸ್ಟ್ ಮಾಡಬಹುದು ಎಂದು ‘ಎಕ್ಸ್ ’ ಸಿಇಓ ಲಿಂಡಾ ಯಾಕರಿನೋ ಘೋಷಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಯಾಕರಿನೋ ‘ಸಣ್ಣ ಪರದೆಯಿಂದ ದೊಡ್ಡ ಪರದೆಯವರೆಗೆ, ಎಕ್ಸ್ ಎಲ್ಲವನ್ನೂ ಬದಲಾಯಿಸಲಿದೆ’ ಎಂದು ಬರೆದುಕೊಂಡಿದ್ದಾರೆ. ಎಐ ಚಾಲಿತ ವಿಷಯಗಳನ್ನು ಈ ಅಪ್ಲಿಕೇಶನ್ ಒಳಗೊಳ್ಳಲಿದ್ದು, ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಈ ಎಕ್ಸ್ ಟಿವಿ ಆ್ಯಪ್ ಹೆಚ್ಚುಕಮ್ಮಿ ಯುಟ್ಯೂಬ್ ಫೀಚರ್ ಗಳನ್ನೇ ಹೋಲಲಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕ್ಸಿಗೆ 100 ಅಡಿ ಉದ್ದದ ಕೆಂಪು ಹಾಸು ಹಾಕಿ ಟ್ರಂಪ್‌ ಸ್ವಾಗತ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!