ಟೆಲ್ ಅವಿವ್: ಹಮಾಸ್ ದಾಳಿಯಿಂದಾಗಿ ಅಪಹರಿಸಲ್ಪಟ್ಟಿರುವ ಜನರ ಪೋಸ್ಟರ್‌ಗಳನ್ನು ಇಸ್ರೇಲ್‌ನಲ್ಲಿ ಎಲ್ಲೆಡೆ ಹಚ್ಚಲಾಗಿದೆ. ಇವರನ್ನು ಹಮಾಸ್ ಉಗ್ರರು ದಾಳಿ ಮಾಡಿದ ವೇಳೆ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಇಲ್ಲವೇ ಘಟನೆಯಲ್ಲಿ ಮಡಿದಿದ್ದಾರೆ ಎನ್ನಲಾಗಿದೆ. ಅಂದಿನಿಂದಲೂ ಅವರ ಮನೆಯವರು ಆಯಾ ವ್ಯಕ್ತಿಗಳ ಚಿತ್ರವನ್ನು ಪೋಸ್ಟರ್‌ಗಳಾಗಿ ಮಾಡಿಸಿ ಪ್ರಮುಖ ಸ್ಥಳಗಳಲ್ಲಿ ಅಂಟಿಸುತ್ತಿದ್ದಾರೆ. ಮೆಟ್ರೋ ನಿಲ್ದಾಣ, ಪ್ರಮುಖ ರಸ್ತೆಗಳು, ಪ್ರಮುಖ ತಾಣಗಳು ಅಲ್ಲೆಲ್ಲ ಕಾಣೆಯಾದವರ ಚಿತ್ರವಿರುವ ಪೋಸ್ಟರ್‌ಗಳು ಕಾಣಸಿಗುತ್ತಿದೆ.