ಇರಾಕ್‌ ಮಾಲಲ್ಲಿ ಅಗ್ನಿ ಅವಘಡಕ್ಕೆ 69 ಬಲಿ

KannadaprabhaNewsNetwork |  
Published : Jul 18, 2025, 12:45 AM ISTUpdated : Jul 18, 2025, 07:30 AM IST
ಇರಾಕ್ | Kannada Prabha

ಸಾರಾಂಶ

ವಾರದ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮಾಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ, 69 ಜನರು ಅಸುನೀಗಿದ ದಾರುಣ ಘಟನೆ ಇರಾಕ್‌ನ ಪೂರ್ವ ಪ್ರಾಂತ್ಯದಲ್ಲಿ ಗುರುವಾರ ನಡೆದಿದೆ.

 ಬಾಗ್ದಾದ್‌: ವಾರದ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮಾಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ, 69 ಜನರು ಅಸುನೀಗಿದ ದಾರುಣ ಘಟನೆ ಇರಾಕ್‌ನ ಪೂರ್ವ ಪ್ರಾಂತ್ಯದಲ್ಲಿ ಗುರುವಾರ ನಡೆದಿದೆ.

ವಸಿಟ್ ಪ್ರಾಂತ್ಯದ ಕುಟ್‌ ನಗರದಲ್ಲಿ ಕಳೆದ ವಾರವಷ್ಟೇ 5 ಅಂತಸ್ತಿನ ಮಾಲ್‌ ಉದ್ಘಾಟನೆಗೊಂಡಿತ್ತು. ಈ ಮಾಲ್‌ ರೆಸ್ಟೋರೆಂಟ್‌, ಶಾಂಪಿಂಗ್‌ ಕಾಂಪ್ಲೆಕ್ಸ್‌ ಎಲ್ಲವನ್ನೂ ಒಳಗೊಂಡಿತ್ತು. ಗುರುವಾರ ಇದ್ದಕ್ಕಿದ್ದಂತೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಕೆಲವರು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸಾವನ್ನಪ್ಪಿದರೆ, ಇನ್ನು ಕೆಲವರು ಬೆಂಕಿಯಿಂದ ಎದ್ದ ಹೊಗೆಯಿಂದಾಗಿ ಉಸಿರಾಡಲಾಗದೇ ಸಾವನ್ನಪ್ಪಿದ್ದಾರೆ. ಹೀಗೆ ದುರ್ಘಟನೆಯಲ್ಲಿ ಒಟ್ಟು 69 ಜನರು ಮೃತಪಟ್ಟಿದ್ದಾರೆ. 45 ಜನರನ್ನು ರಕ್ಷಿಸಲಾಗಿದೆ.

ದುರ್ಘಟನೆ ಬಗ್ಗೆ ಮಾತನಾಡಿದ ಸಚಿವರೊಬ್ಬರು, ಮಾಲ್‌ ಮತ್ತು ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ 48 ಗಂಟೆಗಳ ಒಳಗೆ ಪ್ರಾಥಮಿಕ ವರದಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಇರಾಕ್‌ನಲ್ಲಿ ಕಟ್ಟಡಕ್ಕೆ ಬೆಂಕಿ ಬಿದ್ದು ಸಾವನ್ನಪ್ಪುವುದು ಹೊಸದೇನಲ್ಲ. 2021ರಲ್ಲಿ ಆಸ್ಪತ್ರೆಗೆ ಬೆಂಕಿ ಬಿದ್ದು, 92 ಜನರು ಬಲಿಯಾಗಿದ್ದರು. 2023ಕ್ಕೆ ಮದುವೆ ಹಾಲ್‌ಗೆ ಬೆಂಕಿ ತಗುಲಿ 100ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ
ಬೋಂಡಿ ಬೀಚ್‌ ದಾಳಿಗೆ ತಿರುವು - ಅವನುಭಾರತದವ !