ಇತ್ತೀಚೆಗೆ ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಅಪಹರಣ ಮಾಡುತ್ತಿದ್ದ ಹೌತಿ ಉಗ್ರರರ ನೆಲೆಗಳ ಮೇಲೆ ಅಮೆರಿಕ ಹಾಗೂ ಬ್ರಿಟನ್ ನೌಕಾಪಡೆಗಳು ದಾಳಿ ನಡೆಸಿವೆ. ಇದರಿಂದಾಗಿ ಒಟ್ಟು ಐವರು ಉಗ್ರರು ಹತರಾಗಿದ್ದಾರೆ.
ದುಬೈ: ಇತ್ತೀಚೆಗೆ ಕೆಂಪು ಸಮುದ್ರದಲ್ಲಿ ಸಾಗು ತ್ತಿದ್ದ ಹಡಗುಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕವಾಗಿ ಅಮೆರಿಕ ಹಾಗೂ ಬ್ರಿಟನ್ ನೌಕಾಪಡೆಗಳು ಹೌತಿ ಉಗ್ರರ ನೆಲೆಗಳ ಮೇಲೆ ಜಲದಾಳಿ ಹಾಗೂ ವಾಯುದಾಳಿ ನಡೆಸಿವೆ. ಇದರಿಂದಾಗಿ 5 ಉಗ್ರರು ಹತರಾಗಿ 6 ಮಂದಿ ಗಾಯಗೊಂಡಿದ್ದಾರೆ.
ಹಡಗುಗಳ ಸಂಚಾರದಲ್ಲಿ ಪ್ರಮುಖ ಮಾರ್ಗವಾಗಿರುವ ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳನ್ನು ಹೌತಿ ಉಗ್ರರು ಅಪಹರಣ ಮಾಡಿ ದಾಳಿ ನಡೆಸಿದ್ದರು. ಬುಧವಾರ ಅಮೆರಿಕದ ಮತ್ತೊಂದು ಹಡಗನ್ನು ಹೌತಿ ಉಗ್ರರು ಅಪಹರಣ ಮಾಡಿದ್ದರು. ಹೀಗಾಗಿ ಅಮೆರಿಕ ಪ್ರತೀಕಾರಕ್ಕಾಗಿ ದಾಳಿ ಮಾಡಿದೆ.
ಈ ದಾಳಿಯನ್ನು ಹೌತಿ, ಹಮಾಸ್ ಉಗ್ರರು, ಲೆಬನಾನ್‌ನ ಹಿಜ್ಬುಲ್ಲಾ ತೀವ್ರವಾಗಿ ಖಂಡಿಸಿದ್ದು, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿವೆ.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.