ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಅಮೆರಿಕದ ರಿಪಬ್ಲಿಕನ್ ಸಂಸದ ಮ್ಯಾಕ್ ಕಾರ್ಮಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್: ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಅಮೆರಿಕದ ರಿಪಬ್ಲಿಕನ್ ಸಂಸದ ಮ್ಯಾಕ್ ಕಾರ್ಮಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿಗೆ ಶೇ.70ರಷ್ಟು ಜನಪ್ರಿಯತೆಯಿದ್ದು, ತಮ್ಮ ಪ್ರಧಾನಮಂತ್ರಿಯ ಅವಧಿಯಲ್ಲಿ ಪ್ರತಿವರ್ಷ ಭಾರತದ ಆರ್ಥಿಕ ಸ್ಥಿತಿ ಶೇ.4ರಿಂದ 8ರಷ್ಟು ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅವರ ಜೊತೆ ನಾನೂ ಸಹ ಭೋಜನ ಸವಿದಿದ್ದು, ಅವರ ನಡವಳಿಕೆಯನ್ನು ಗಮನಿಸಿದಲ್ಲಿ ಅವರು ಮತ್ತೆ ಪ್ರಧಾನಿಯಾಗುವುದು ಖಚಿತ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತೊಬ್ಬ ಸಂಸದನ ಪ್ರಶಂಸೆ:
ಬೆಳಗಾವಿ ಮೂಲದ ಅಮೆರಿಕನ್ ಸಂಸದ ಥಾಣೇದಾರ್ ಕೂಡ ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಭಾರತದಲ್ಲಿ ಅಗಾಧ ಬದಲಾವಣೆಯಾಗಿದ್ದು, ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗಿದೆ. ಭಾರತವು 10ನೇ ಸ್ಥಾನದಿಂದ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೆ ನೆಗೆದಿದೆ ಎಂದು ಪ್ರಶಂಸಿಸಿದರು.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.