ಉಗ್ರರ ಪೇಜರಲ್ಲಿ 3 ಗ್ರಾಂ ಬಾಂಬ್‌ ಇಟ್ಟಿದ್ದ ಇಸ್ರೇಲ್‌ - ಇದು ಗೊತ್ತಿಲ್ಲದೆ ಹಲವು ತಿಂಗಳು ಬಳಸಿದ್ದ ಉಗ್ರರು

Published : Sep 19, 2024, 10:04 AM IST
bomb threat

ಸಾರಾಂಶ

ಲೆಬನಾನ್‌ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಾವಿರಾರು ಪೇಜರ್‌ಗಳನ್ನು ಇಸ್ರೇಲ್‌ ಏಕಕಾಲದಲ್ಲಿ ಸ್ಫೋಟಿಸಿದ್ದು ಹೇಗೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಈ ಪೇಜರ್‌ಗಳು ಉತ್ಪಾದನಾ ಹಂತದಲ್ಲಿದ್ದಾಗಲೇ ಇಸ್ರೇಲ್‌ ರಹಸ್ಯವಾಗಿ ಸ್ಫೋಟಕಗಳನ್ನು ಅಳವಡಿಸಿತ್ತು.

ಬೈರೂತ್‌: ತನ್ನ ದೇಶದ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ಲೆಬನಾನ್‌ ಹಾಗೂ ಸಿರಿಯಾದಲ್ಲಿನ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಸಹಸ್ರಾರು ಪೇಜರ್‌ಗಳನ್ನು ಏಕಕಾಲಕ್ಕೆ ಸ್ಫೋಟಿಸುವ ಮೂಲಕ ವಿಶ್ವವನ್ನೇ ಚಕಿತಗೊಳಿಸಿರುವ ಇಸ್ರೇಲ್‌, ಈ ಕಾರ್ಯಾಚರಣೆಯನ್ನು ಹೇಗೆ ನಡೆಸಿತು ಎಂಬುದು ಕುತೂಹಲ ಕೆರಳಿಸಿದೆ. ಇದರ ಬೆನ್ನತ್ತಿ ಹೋದಾಗ ವಿಶ್ವವೇ ಅಚ್ಚರಿಪಡುವಂತಹ ಸಂಗತಿ ಬೆಳಕಿಗೆ ಬಂದಿದೆ.

ಈ ಪೇಜರ್‌ಗಳು ಉತ್ಪಾದನಾ ಹಂತದಲ್ಲಿರುವಾಗಲೇ, ಪ್ರತಿ ಪೇಜರ್‌ನಲ್ಲೂ ಕೋಡ್‌ ಮೂಲಕ ಸ್ಫೋಟಿಸಬಹುದಾದ 3 ಗ್ರಾಂ ಸ್ಫೋಟಕವನ್ನು ಇಸ್ರೇಲ್‌ ರಹಸ್ಯವಾಗಿ ಅಳವಡಿಕೆ ಮಾಡಿತ್ತು. ಈ ಸಂಗತಿ ಗೊತ್ತಿಲ್ಲದೆ ಹಲವು ತಿಂಗಳುಗಳ ಕಾಲ ಉಗ್ರರು ಬಾಂಬ್‌ ಇದ್ದ ಪೇಜರ್‌ ಬಳಸಿದ್ದರು ಎಂದು ತಿಳಿದು ಬಂದಿದೆ.

ಇಸ್ರೇಲ್‌ ಕಣ್ಗಾವಲಿನಿಂದ ಪಾರಾಗಲು ಹಿಜ್ಬುಲ್ಲಾ ಉಗ್ರ ಸಂಘಟನೆ ತನ್ನ ಸದಸ್ಯರಿಗೆ ಪೇಜರ್‌ ಮೊರೆ ಹೋಗಲು ಸೂಚಿಸಿತ್ತು. 5000 ಪೇಜರ್‌ಗಳನ್ನು ಒದಗಿಸುವಂತೆ ತೈವಾನ್‌ ಮೂಲದ ಗೋಲ್ಡ್‌ ಅಪೋಲೋ ಕಂಪನಿಗೆ ಸೂಚಿಸಿತ್ತು. ಗೋಲ್ಡ್‌ ಅಪೋಲೋ ಹೆಸರಿನಲ್ಲಿ ಈ ಪೇಜರ್‌ಗಳು ಯುರೋಪ್‌ನ ಕಂಪನಿಯಲ್ಲಿ ತಯಾರಾಗಿದ್ದವು.

ಈ ವಿಷಯವನ್ನು ಹೇಗೋ ಪತ್ತೆ ಹಚ್ಚಿದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌, ಪೇಜರ್‌ಗಳು ಕಾರ್ಖಾನೆಯಲ್ಲಿ ತಯಾರಿಕಾ ಹಂತದಲ್ಲಿರುವಾಗಲೇ ಅದಕ್ಕೆ ತಲಾ 3 ಗ್ರಾಂ ಸ್ಫೋಟಕ ತುಂಬಿದ ಬೋರ್ಡ್‌ಗಳನ್ನು ಅಳವಡಿಕೆ ಮಾಡಿತ್ತು. ಯಾವುದೇ ಸ್ಕ್ಯಾನರ್‌ ಅಥವಾ ಉಪಕರಣ ಬಳಸಿದರೂ ಈ ಸ್ಫೋಟಕ ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮಂಗಳವಾರ ಈ ಪೇಜರ್‌ಗಳಿಗೆ ನಿರ್ದಿಷ್ಟ ಕೋಡ್‌ ಕಳುಹಿಸಿದಾಗ ಅವು ಸ್ಫೋಟಗೊಂಡಿವೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ಯುರೋಪ್‌ ನಾಯಕರ ಶಾಲೆ ಮಕ್ಕಳಂತೆ ಕೂರಿಸಿದ ಟ್ರಂಪ್‌ !
ಭಾರತ-ಚೀನಾ ಒಪ್ಪಂದ ನಡುವೆ ನೇಪಾಳ ಗಡಿ ಕ್ಯಾತೆ