ಪ್ರಕ್ಷುಬ್ಧತೆಯಿಂದ ಹೊಯ್ದಾಡಿದ ವಿಮಾನ: 1 ಸಾವು

KannadaprabhaNewsNetwork |  
Published : May 22, 2024, 01:01 AM ISTUpdated : May 22, 2024, 06:28 AM IST
ವಿಮಾನ ಹೊಯ್ದಾಟ | Kannada Prabha

ಸಾರಾಂಶ

ಲಂಡನ್‌-ಸಿಂಗಾಪುರ ವಿಮಾನದಲ್ಲಿ ದುರ್ಘಟನೆ ಸಂಭವಿಸಿದ್ದು, 37000 ಅಡಿ ಎತ್ತರದಿಂದ ಏಕಾಏಕಿ 31000 ಅಡಿಗೆ ಕುಸಿತ ಕಂಡಿದೆ.

ಬ್ಯಾಂಕಾಕ್ :  ಪ್ರಕ್ಷುಬ್ಧ ವಾತಾವರಣದ ಪರಿಣಾಮ 229 ಜನರು ಪ್ರಯಾಣಿಸುತ್ತಿದ್ದ ವಿಮಾನ ಭಾರೀ ಕುಲುಕಾಟಕ್ಕೆ ಒಳಗಾಗಿ ಓರ್ವ ಪ್ರಯಾಣಿಕ ಸಾವನ್ನಪ್ಪಿ, 30 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಲಂಡನ್‌ನಿಂದ ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದ ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಈ ಘಟನೆ ನಡೆದಿದೆ.

ಪ್ರತಿಕೂಲ ವಾತಾವರಣದ ಪರಿಣಾಮ, ವಿಮಾನ ದಿಢೀರನೆ ಸಾವಿರಾರು ಅಡಿ ಕೆಳಗೆ ಕುಸಿಯುವ ಮತ್ತು ಭಾರೀ ಕುಲುಕಾಟಕ್ಕೆ ತುತ್ತಾಗುವ ಘಟನೆಗಳು ಹೊಸದಲ್ಲವಾದರೂ, ಇಂಥ ಘಟನೆಯಿಂದ ವಿಮಾನದೊಳಗೆ ಸಾವು ಸಂಭವಿಸುವ ಪ್ರಕರಣ ಅತ್ಯಂತ ವಿರಳ.ಏನಾಯ್ತು?:

211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಒಳಗೊಂಡ ಸಿಂಗಾಪುರ್‌ ಏರ್‌ಲೈನ್ಸ್‌ ವಿಮಾನ ಮಂಗಳವಾರ ಲಂಡನ್‌ನಿಂದ- ಸಿಂಗಾಪುರಕ್ಕೆ ಪ್ರಯಾಣಿಸುತ್ತಿತ್ತು. 37000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ಪ್ರಕ್ಷುಬ್ಧ ವಾತಾವರಣದ ಪರಿಣಾಮಕ್ಕೆ ತುತ್ತಾಗಿದೆ. ಈ ವೇಳೆ ಓರ್ವ ಪ್ರಯಾಣಿಕ ಸಾವನ್ನಪ್ಪಿದರೆ, ಇತರೆ ಹಲವರು ಗಾಯಗೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ಬಳಿಕ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಘಟನೆಗೆ ಕಾರಣ ಏನು ಎಂದು ವಿಮಾನಯಾನ ಕಂಪನಿ ಹೇಳಿಲ್ಲವಾದರೂ, 37000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಕೇವಲ 3 ನಿಮಿಷದ ಅವಧಿಯಲ್ಲಿ 31000 ಅಡಿಗೆ ಕುಸಿದಿರುವುದು ದಾಖಲೆಗಳಲ್ಲಿ ಕಂಡುಬಂದಿದೆ. ಅಂದರೆ ಏಕಾಏಕಿ 6000 ಅಡಿ ಕುಸಿತವಾಗಿದೆ. ಸಾಮಾನ್ಯವಾಗಿ ಏರ್‌ಪಾಕೆಟ್‌ ಎಂದು ಕರೆಯಲಾಗುವ ಸ್ಥಳಗಳಲ್ಲಿ ವಿಮಾನಗಳು ಹಾದುಹೋಗುವಾಗ ಈ ದುರ್ಘಟನೆ ಸಂಭವಿಸುತ್ತದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಇರಾನ್‌, ಇಸ್ರೇಲ್‌ ವಿರುದ್ಧ ಟ್ರಂಪ್‌ ಗುಡುಗು
ತೈಲ, ಅನಿಲ ಪೂರೈಕೆ ಸಹಜ ಸ್ಥಿತಿಗೆ ಮರಳುವ ಆಶಾಕಿರಣ