ನ್ಯೂಯಾರ್ಕ್: ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ತಮ್ಮ 92ರ ಇಳಿ ವಯಸ್ಸಲ್ಲಿ 5ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ಗೆಳತಿ ಎಲೆನಾ ಜುಕೋವಾ ಅವರನ್ನು ಜೂನ್‌ನಲ್ಲಿ ವಿವಾಹವಾಗಲಿರುವುದಾಗಿ ರೂಪರ್ಟ್ ಘೋಷಣೆ ಮಾಡಿದ್ದಾರೆ. ಕಳೆದ ವರ್ಷ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ರೂಪರ್ಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ತಿಂಗಳಲ್ಲೇ ಅದು ಮುರಿದು ಬಿದ್ದಿತ್ತು. ಈಗ ವಿವಾಹವಾಗುತ್ತಿರುವ ಜುಕೋವಾ ಅಮೆರಿಕದ ನಿವೃತ್ತ ಜೀವಶಾಸ್ತ್ರಜ್ಞೆ. ಅವರು ರೂಪರ್ಟ್‌ಗಿಂತ ಅತ್ಯಂತ ಕಿರಿಯರಾಗಿದ್ದು ಅವರಿಗೆ 67 ವರ್ಷ ವಯಸ್ಸು. ರೂಪರ್ಟ್ ವಿವಾಹ ಕ್ಯಾಲಿಫೋರ್ನಿಯಾದ ಅವರ ಮೊರಗಾ ಎಸ್ಟೇಟ್‌ನಲ್ಲಿ ನಿಗದಿಯಾಗಿದೆ.