ಮುಸ್ಲಿಂ ದೇಶದ ಹೇಳಿಕೆ ಸ್ಟುಪಿಡ್‌ : ಮ್ಯಾಕ್ರಾನ್‌ ಕಿಡಿ

Published : Oct 22, 2026, 07:29 AM IST
emmanuel macron

ಸಾರಾಂಶ

ಜೀವನ ವೆಚ್ಚ ಏರಿಕೆ ವಿರೋಧಿಸಿ ಫ್ರಾನ್ಸ್‌ನಲ್ಲಿ ನಡೆದ ದೊಡ್ಡ ಮಟ್ಟದ ದಂಗೆಗೆ ವಲಸಿಗರೇ ಕಾರಣ. ಪ್ಯಾರಿಸ್‌ ಮುಸ್ಲಿಮರ ನಗರಿ ಆಗಿಬಿಡುತ್ತಿದೆ ಎಂದಿದ್ದ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವಲ್‌ ಮ್ಯಾಕ್ರಾನ್‌ ‘ಸ್ಟುಪಿಡ್‌’ ಎಂದು ಕರೆದಿದ್ದಾರೆ.

ಪ್ಯಾರಿಸ್‌: ಇತ್ತೀಚೆಗೆ ಜೀವನ ವೆಚ್ಚ ಏರಿಕೆ ವಿರೋಧಿಸಿ ಫ್ರಾನ್ಸ್‌ನಲ್ಲಿ ನಡೆದ ದೊಡ್ಡ ಮಟ್ಟದ ದಂಗೆಗೆ ವಲಸಿಗರೇ ಕಾರಣ. ಪ್ಯಾರಿಸ್‌ ಮುಸ್ಲಿಮರ ನಗರಿ ಆಗಿಬಿಡುತ್ತಿದೆ ಎಂದಿದ್ದ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವಲ್‌ ಮ್ಯಾಕ್ರಾನ್‌ ‘ಸ್ಟುಪಿಡ್‌’ ಎಂದು ಕರೆದಿದ್ದಾರೆ. ಜತೆಗೆ, ‘ಪರಿಸ್ಥಿತಿಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ವಿದೇಶಿ ನಾಯಕರು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪರಿಸ್ಥಿತಿಯನ್ನು ದುರುಪಯೋಗ

‘ಫ್ರಾನ್ಸ್‌ನಲ್ಲಿ ನಡೆದ ದಂಗೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವ ಮೂಲಕ, ಟ್ರಂಪ್‌ ಸೇರಿದಂತೆ ವಿದೇಶಿ ನಾಯಕರು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯದ ಘಟನೆಗಳ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಿ ಹರಿಬಿಡಲಾಗುತ್ತಿದೆ. ವಲಸಿಗರು ಮತ್ತು ಇಸ್ಲಾಮಿಸ್ಟ್‌ಗಳ ಗುಂಪುಗಳು ಫ್ರಾನ್ಸ್‌ ಮೇಲೆ ಆಕ್ರಮಣ ನಡೆಸಿವೆ ಎಂಬ ಸುಳ್ಳು ನಿರೂಪಣೆಗಳನ್ನೂ ಪ್ರಚಾರ ಮಾಡಲಾಗುತ್ತಿದೆ’ ಎಂದು ಮ್ಯಾಕ್ರಾನ್‌ ಆಕ್ರೋಶ ವ್ಯಕ್ತಪಡಿಸಿದರು.

ಫ್ರಾನ್ಸ್‌ ಜನ ಬೀದಿಗಿಳಿದು ಹೋರಾಟ ನಡೆಸಿದ್ದರು

ಸರ್ಕಾರಿ ಶಾಲೆಗಳ ದುಃಸ್ಥಿತಿ, ಗಗನಕ್ಕೇರುತ್ತಿರುವ ಜೀವನ ವೆಚ್ಚ, ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕೆಲ ದಿನಗಳ ಹಿಂದೆ ಫ್ರಾನ್ಸ್‌ ಜನ ಬೀದಿಗಿಳಿದು ಹೋರಾಟ ನಡೆಸಿದ್ದರು. ಕೆಲ ಕಡೆ ಇದು ಹಿಂಸಾಚಾರಕ್ಕೂ ಎಡೆಮಾಡಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಫ್ರಾನ್ಸ್‌ ರೀತಿ ಇಟಲಿಯಲ್ಲೂ ಅಂಗಡಿ ಮುಂಗಟ್ಟು ಲೂಟಿ
ಜೆನ್‌ಝಿರಾಕತೆ ಬೆನ್ನಲ್ಲೇ ಹಿಂಸೆ, ದರೋಡೆ ಹತ್ತಿಕ್ಕಲು ಫ್ರಾನ್ಸ್‌ ದೇಶದಲ್ಲಿ ಕರ್ಫ್ಯೂ