ನ್ಯೂರೋಲಿಂಕ್‌ ಚಿಪ್‌ ಅಳವಡಿಕೆ: ಮನಸ್ಸಿನಲ್ಲಿ ಯೋಚಿಸಿ ಮೌಸ್‌ ಚಲಿಸಿದ ರೋಗಿ

KannadaprabhaNewsNetwork |  
Published : Feb 21, 2024, 02:04 AM ISTUpdated : Feb 21, 2024, 07:59 AM IST
Mind

ಸಾರಾಂಶ

ನ್ಯೂರೋಲಿಂಕ್‌ ಚಿಪ್‌ ಅಳವಡಿಕೆ ಪ್ರಯೋಕ್ಕೆ ಮೊದಲ ಯಶಸ್ಸು ಲಭಿಸಿದ್ದು, ಪ್ರಯೋಗಪಟುವೊಬ್ಬರ ಮೆದುಳಿನಲ್ಲಿ ಅಳವಡಿಸಲಾದ ಚಿಪ್‌ಗೆ ಸೂಚನೆ ಕೊಡುವ ಮೂಲಕ ದೂರದಲ್ಲಿದ್ದ ಕಂಪ್ಯೂಟರ್ ಮೌಸ್‌ ಚಲಿಸಲಾಗಿದೆ ಎಂದು ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

ನ್ಯೂಯಾರ್ಕ್‌: ಆಧುನಿಕ ವೈದ್ಯಕೀಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ ಬರೆಯಬಹುದು ಎಂದು ಎಣಿಸಲಾಗಿರುವ ಎಲಾನ್‌ ಮಸ್ಕ್‌ರ ನ್ಯೂರೋಲಿಂಕ್‌ ಯೋಜನೆಗೆ ಮೊದಲ ಯಶಸ್ಸು ಸಿಕ್ಕಿದೆ. 

ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಮೆದುಳಿಗೆ ಚಿಪ್‌ ಅಳವಡಿಸಿಕೊಂಡಿದ್ದ ವ್ಯಕ್ತಿ ತನ್ನ ಮನಸ್ಸಿನಲ್ಲಿ ಯೋಚಿಸುವ ಮೂಲಕವೇ ದೂರದಲ್ಲಿದ್ದ ಕಂಪ್ಯೂಟರ್‌ ಮೌಸ್‌ ಚಲಿಸುವಂತೆ ಮಾಡಿದ್ದಾರೆ ಎಂದು ಮಸ್ಕ್‌ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನ್ಯೂರೋಲಿಂಕ್‌ನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೊದಲ ವ್ಯಕ್ತಿ ಇದೀಗ ಸಂಪೂರ್ಣ ಆರೋಗ್ಯವಾಗಿದ್ದಾನೆ. 

ಶಸ್ತ್ರಚಿಕಿತ್ಸೆಯ ಬಳಿಕ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಅಲ್ಲದೇ ಆತ ಸ್ಕ್ರೀನ್‌ ಮೇಲಿದ್ದ ಕಂಪ್ಯೂಟರ್‌ ಮೌಸ್‌ ಪಾಯಿಂಟರನ್ನು ತನ್ನ ಯೋಚನೆಯ ಮೂಲಕ ನಿಯಂತ್ರಿಸಿದ್ದಾನೆ ಎಂದು ಹೇಳಿದ್ದಾರೆ.

ನ್ಯೂರೋಲಿಂಕ್‌ ಎಲಾನ್‌ ಮಸ್ಕ್‌ ಆರಂಭಿಸಿರುವ ಸ್ಟಾರ್ಟಪ್‌ ಆಗಿದ್ದು, ಇದು ಮನುಷ್ಯರ ಮೆದುಳಿಗೆ ಎಲೆಕ್ಟ್ರಾನಿಕ್‌ ಚಿಪ್‌ಗಳನ್ನು ಅಳವಡಿಸುವ ಮೂಲಕ ಅವರ ಯೋಚನೆಯಿಂದಲೇ ಕೆಲಸಗಳನ್ನು ನಿರ್ವಹಿಸುವಂತೆ ಮಾಡುತ್ತದೆ. 

ಯೋಚನೆಯ ಮೂಲಕವೇ ಕಂಪ್ಯೂಟರ್‌ನ ಮೌಸ್‌ ಮತ್ತು ಕೀಬೋರ್ಡ್‌ಗಳನ್ನು ಬಳಕೆ ಮಾಡಬಹುದು ಎಂದು ನ್ಯೂರೋಲಿಂಕ್‌ ಹೇಳಿದೆ.

 ಪಾರ್ಶ್ವವಾಯು ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಯೋಜನೆ ವರದಾನ ಆಗಬಹುದು ಎಂದು ಹೇಳಲಾಗಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌