ಪ್ರಗತಿಯಲ್ಲಿ ಭಾರತವನ್ನು ಪಾಕ್‌ ಸೋಲಿಸುತ್ತೆ: ಸೋಲಿಸದಿದ್ರೆ ನನ್ನ ಹೆಸರು ಷರೀಫ್‌ ಅಲ್ಲ: ಪಾಕ್‌ ಪಿಎಂ

Published : Feb 25, 2025, 11:50 AM IST
Shehbaz Sharif

ಸಾರಾಂಶ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ ದಿಟ್ಟ ಹೇಳಿಕೆಯೊಂದನ್ನು ನೀಡಿದ್ದು ‘ಪಾಕಿಸ್ತಾನವು ಪ್ರಗತಿಯಲ್ಲಿ ಭಾರತವನ್ನು ಮೀರಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ’ ಎಂದು ಘೋಷಿಸಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ ದಿಟ್ಟ ಹೇಳಿಕೆಯೊಂದನ್ನು ನೀಡಿದ್ದು ‘ಪಾಕಿಸ್ತಾನವು ಪ್ರಗತಿಯಲ್ಲಿ ಭಾರತವನ್ನು ಮೀರಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ’ ಎಂದು ಘೋಷಿಸಿದ್ದಾರೆ.

ಡೇರಾ ಘಾಜಿ ಖಾನ್‌ನಲ್ಲಿ ನೆರೆದಿದ್ದ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನವನ್ನು ಪ್ರಸ್ತುತ ಸವಾಲುಗಳಿಂದ ಹೊರತಂದು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವೆ’ ಎಂದು ಪ್ರತಿಜ್ಞೆ ಮಾಡಿದರು.

‘ನಾವು ಭಾರತವನ್ನು ಹಿಂದೆ ಹಾಕದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ. ನಾವು ಪಾಕಿಸ್ತಾನವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುತ್ತೇವೆ ಮತ್ತು ಭಾರತಕ್ಕಿಂತ ಮುಂದೆ ಸಾಗುತ್ತೇವೆ. ಪಾಕಿಸ್ತಾನವನ್ನು ಸುಧಾರಿಸಲು ನಾವು ಹಗಲಿರುಳು ಶ್ರಮಿಸುತ್ತೇವೆ. ಪಾಕಿಸ್ತಾನ ಭಾರತಕ್ಕಿಂತ ದೊಡ್ಡ ರಾಷ್ಟ್ರವಾಗುವ ದಿನ ದೂರವಿಲ್ಲ’ ಎಂದರು.

ಸರ್ಕಾರವು ವಿದೇಶಿ ಸಾಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಶೇ.40 ರಷ್ಟಿದ್ದ ಹಣದುಬ್ಬರವು ಶೇ.2 ಕ್ಕೆ ಇಳಿದಿದೆ ಎಂದರು.

PREV

Recommended Stories

ರಷ್ಯಾದಿಂದ ಭಾರತ ತೈಲ ಖರೀದಿ ಸ್ಥಗಿತ: ಟ್ರಂಪ್‌ ಸ್ವಯಂ ಘೋಷಣೆ
ಟ್ರಂಪ್‌ಗೆ ನೊಬೆಲ್‌ ಶಾಂತಿ ಪ್ರಶಸ್ತಿ ಕೊಡಿ : ಶ್ವೇತ ಭವನ ಕಾರ್ಯದರ್ಶಿ