ನವದೆಹಲಿ: ದಿನಕ್ಕೆ ಕೇವಲ 3-5 ತಾಸು ನಿದ್ರೆ ಮಾಡುವ ಜನರು ಎರಡನೇ ಹಂತದ ಡಯಾಬಿಟಿಸ್ ಕಾಯಿಲೆ ಹೆಚ್ಚು ತುತ್ತಾಗಲಿದ್ದಾರೆ ಎಂದು ವರದಿಯೊಂದು ಹೇಳಿದೆ.
ದಿನಕ್ಕೆ 6 ಗಂಟೆಗಿಂತ ಕಡಿಮೆ ಅವಧಿ ನಿದ್ರಿಸುವವರ ದೇಹ ಬ್ಲಡ್ ಶುಗರ್ ಉತ್ಪಾದನೆಗೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ.
ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಪೂರೈಕೆಯನ್ನು ತಡೆಗಟ್ಟಲಿದೆ. ಇದರ ಪರಿಣಾಮ ದೇಹದಲ್ಲಿ ಹೈ ಬ್ಲಡ್ ಶುಗರ್ ಆಗಲಿದೆ.ಇದು ಪೌಷ್ಟಿಕ ಆಹಾರ ಸೇವನೆಯಿಂದ ಸರಿದೂಗಿಸಲು ಆಗದು ಎಂದು ಸ್ವೀಡನ್ ದೇಶದ ಉಪ್ಸಾಲಾ ವಿಶ್ವ ವಿದ್ಯಾಲಯ ಹೊರತಂದ ವರದಿ ಹೇಳಿದೆ.