ಉಚಿತ ಟಿಕೆಟ್‌ನಲ್ಲಿ 33 ಕೋಟಿ ಲಾಟರಿ ಗೆದ್ದ ಭಾರತೀಯ!

KannadaprabhaNewsNetwork | Updated : Feb 11 2024, 12:18 PM IST

ಸಾರಾಂಶ

ಅಬುಧಾಬಿಯ ಬಿಗ್‌ ಟಿಕೆಟ್‌ ನಡೆಸುವ ವಾರದ ಬಿಗ್‌ ಡ್ರಾನಲ್ಲಿ ಕೇರಳ ಮೂಲದ ವ್ಯಕ್ತಿಗೆ 33 ಕೋಟಿ ರು. ಲಾಟರಿ ಹೊಡೆದಿದೆ.

ಅಬುಧಾಬಿ: ಕೇರಳ ಮೂಲದ ರಾಜೀವ್‌ ಅರಿಕಾಟ್‌ಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಜಾಕ್‌ಪಾಟ್‌ ಹೊಡೆದಿದ್ದು, ಬಿಗ್‌ ಟಿಕೆಟ್‌ ನಡೆಸುವ ವಾರದ ಲಾಟರಿ ಡ್ರಾನಲ್ಲಿ ಮೊದಲ ಬಹುಮಾನ ಗೆಲ್ಲುವ ಮೂಲಕ 33 ಕೋಟಿ ರು. ತಮ್ಮದಾಗಿಸಿಕೊಂಡಿದ್ದಾರೆ.

ಆಲ್‌ಐನ್‌ ನಗರದಲ್ಲಿ ಕಟ್ಟಡ ವಿನ್ಯಾಸ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಜೀವ್‌ ಈ ಹಣವನ್ನು 19 ಜನರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ ರಾಜೀವ್‌ಗೆ ಅದೃಷ್ಟ ಖುಲಾಯಿಸಿದ ಟಿಕೆಟ್‌ ಅವರಿಗೆ ಬಿಗ್‌ ಟಿಕೆಟ್‌ ವತಿಯಿಂದ ಆಫರ್‌ ಲೆಕ್ಕದಲ್ಲಿ ಬಂದಿದ್ದು. ತಮ್ಮ ಇಬ್ಬರು ಮಕ್ಕಳ ಹುಟ್ಟುಹಬ್ಬದ ದಿನಾಂಕ ಆಧರಿಸಿ ರಾಜೀವ್‌ 2 ಟಿಕೆಟ್‌ ಖರೀದಿಸಿದ್ದರು.

ಇದಕ್ಕೆ ಪ್ರತಿಯಾಗಿ 4 ಟಿಕೆಟ್‌ ಉಚಿತವಾಗಿ ನೀಡಲಾಗಿತ್ತು. ಹೀಗೆ ಉಚಿತವಾಗಿ ನೀಡಿದ ಟಿಕೆಟ್‌ಗೆ ಇದೀಗ ಬಹುಮಾನ ಬಂದಿದೆ.

Share this article