ಲಂಡನ್: 24 ಕೋಟಿ ವರ್ಷಗಳಷ್ಟು ಹಳೆಯದಾದ 16 ಅಡಿ ಉದ್ದದ ಚೀನಿ ಡ್ರ್ಯಾಗನ್‌ವೊಂದರ ಕುರುಹನ್ನು ಸ್ಕಾಟ್ಲೆಂಡ್ ತಜ್ಞರು ಚೀನಾದ ಗುಯ್ಜು ಪ್ರಾಂತ್ಯದಲ್ಲಿ ಪತ್ತೆ ಹಚ್ಚಿದ್ದಾರೆ.
ಮಧ್ಯಕಾಲೀನ ಶಕಕ್ಕೆ ಸೇರಿದ ಡೈನೋಸಾರ್ ಕುರುಹುವಿನಲ್ಲಿ ದೇಹಕ್ಕಿಂತ ಕತ್ತು ಬಹಳ ಉದ್ದವಾಗಿದೆ. ಆ ಕುರುಹುವಿನಲ್ಲಿ ಜೀವಿಗೆ ಬಾಲವಿದ್ದುದೂ ಸಹ ಗೋಚರವಾಗಿದೆ.
ಈ ಮೂಲಕ ಇದು ಡೈನೋಸಾರ್ ಪ್ರಾಣಿಯ ಕುರುಹು ಆಗಿದೆ ಎಂಬ ತರ್ಕಕ್ಕೆ ಸಂಶೋಧಕರು ಸಹಮತ ಸೂಚಿಸಿದ್ದಾರೆ.
ಇದನ್ನು ಪ್ರಸ್ತುತ ಸ್ಕಾಟ್ಲೆಂಡ್ ಸಂಗ್ರಹಾಲಯದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ.
ಈ ಕುರುಹುವನ್ನು ಹತ್ತು ವರ್ಷಗಳ ಮುಂಚೆಯೇ ಪತ್ತೆ ಮಾಡಿ ಚೀನಾದ ಪ್ರಯೋಗಾಲಯವೊಂದರಲ್ಲಿ ಇದರ ಕುರಿತು ಅಧ್ಯಯನ ನಡೆಸಲಾಗುತ್ತಿತ್ತು. ಈ ಕುರಿತು ಶುಕ್ರವಾರ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.