ಲಷ್ಕರ್‌ನ ಇಬ್ಬರು ಉಗ್ರರು ಟ್ರಂಪ್‌ಗೀಗ ಸಲಹೆಗಾರರು!

KannadaprabhaNewsNetwork |  
Published : May 19, 2025, 12:09 AM ISTUpdated : May 19, 2025, 04:12 AM IST
ಡೊನಾಲ್ಡ್‌ ಟ್ರಂಪ್‌ | Kannada Prabha

ಸಾರಾಂಶ

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನಿಷೇಧಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ನಂಟು ಹೊಂದಿರುವ ಇಬ್ಬರು ಮಾಜಿ ಜಿಹಾದಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದಾರೆ.

 ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನಿಷೇಧಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ನಂಟು ಹೊಂದಿರುವ ಇಬ್ಬರು ಮಾಜಿ ಜಿಹಾದಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದಾರೆ.

ಈ ಪೈಕಿ ಇಸ್ಮಾಯಿಲ್‌ ಎಂಬಾತ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಮತ್ತು 2008ರ ಮುಂಬೈ ದಾಳಿಯಲ್ಲೂ ಭಾಗಿಯಾಗಿದ್ದ ಆರೋಪ ಹೊತ್ತಿದ್ದಾನೆ. ಜೊತೆಗೆ ಉಗ್ರವಾದಕ್ಕೆ ನೆರವು ನೀಡಿದ ಪ್ರಕರಣದಲ್ಲಿ ಅಮೆರಿಕದಲ್ಲಿ ಜೈಲು ಶಿಕ್ಷೆಗೂ ಗುರಿಯಾಗಿದ್ದ.

ಭಯೋತ್ಪಾದನೆ ವಿರುದ್ಧ ದೊಡ್ಡ ದೊಡ್ಡ ಮಾತುಗಳನ್ನು ಆಡುವ ಅಮೆರಿಕ ಅಧ್ಯಕ್ಷ ಟ್ರಂಪ್‌, ಇದೀಗ ಉಗ್ರವಾದದ ಹಿನ್ನೆಲೆಯ ವ್ಯಕ್ತಿಗಳನ್ನೇ ಧಾರ್ಮಿಕ ವಿಷಯದಲ್ಲಿ ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ಜೊತೆಗೆ ರಾಜತಾಂತ್ರಿಕ ಮತ್ತು ಭದ್ರತಾ ವಲಯದಲ್ಲಿ ಭಾರೀ ಆತಂಕಕ್ಕೂ ಕಾರಣವಾಗಿದೆ.

ಯಾರು ನೇಮಕ?:

ಶ್ವೇತಭವನದ ಧಾರ್ಮಿಕ ಸಲಹಾ ಮಂಡಳಿಗೆ ಲಷ್ಕರ್‌, ಹಮಾಸ್‌, ತಾಲಿಬಾನ್, ಅಲ್‌ಖೈದಾ ಮುಸ್ಲಿಂ ಬ್ರದರ್‌ಹುಡ್‌ ನಂಟಿನ ಇಸ್ಮಾಯಿಲ್‌ ರೋಯರ್‌ ಮತ್ತು ಜಿಹಾದಿ ಸಿದ್ಧಾಂತ ಪ್ರತಿಪಾದಿಸುವ ಶ್ಯಾಕ್‌ ಹಮ್ಜಾ ಯೂಸುಫ್‌ರನ್ನು ನೇಮಿಸಲಾಗಿದೆ.

ಇಸ್ಮಾಯಿಲ್ ರೋಯರ್, 2000ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್‌ ಉಗ್ರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ. ಅಲ್ಲದೆ ಭಾರತೀಯ ಭದ್ರತಾ ಕೇಂದ್ರದ ಮೇಲೆ ದಾಳಿ ಸೇರಿ ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ. ಇದಕ್ಕಾಗಿ 2004ರಲ್ಲಿ ಅಮೆರಿಕ ನ್ಯಾಯಾಲಯ ವಿಧಿಸಿದ ಶಿಕ್ಷೆಯಲ್ಲಿ ಈತ 13 ವರ್ಷ ಜೈಲು ಅನುಭವಿಸಿದ್ದ.

ಇನ್ನು ಹಮ್ಜಾ ಜಿಹಾದಿ ಸಿದ್ಧಾಂತದ ಪ್ರತಿಪಾದಕನಾಗಿದ್ದಾನೆ. ಕ್ಯಾಲಿಫೋರ್ನಿಯಾದಲ್ಲಿ ಝೈತುನಾ ಕಾಲೇಜಿನ ಸಹ ಸಂಸ್ಥಾಪಕನಾಗಿದ್ದಾನೆ. ಈತ ಪ್ರಚೋದನಾಕಾರಿ ಭಾಷಣಗಳ ಮೂಲಕ ಉಗ್ರವಾದಿಗಳಿಗೆ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಲು ಪ್ರೇರೇಪಿಸಿದ ಆರೋಪ ಹೊತ್ತಿದ್ದಾನೆ.

PREV
Read more Articles on

Recommended Stories

ಕೇರಳದ ನರ್ಸ್‌ ನಿಮಿಷ ಪ್ರಿಯಾ ಗಲ್ಲು ರದ್ದು : ಮುಫ್ತಿ ಕಚೇರಿ
ಭಾರತೀಯ ಟೆಕ್ಕಿ ನೇಮಕ ಬೇಡ: ಅಮೆರಿಕದ ಕಂಪನಿಗಳಿಗೆ ಟ್ರಂಪ್‌