ಲಂಡನ್: ಬ್ರಿಟನ್ ದೇಶಾದ್ಯಂತ ಪ್ಯಾಲೆಸ್ತೀನ್ ಪರ ಬಾವುಟ ಹಿಡಿದು, ಘೋಷಣೆ ಕೂಗುವುದನ್ನು ನಿಷೇಧಿಸಿ ಕ್ರಮ ತೆಗೆದುಕೊಳ್ಳುವಂತೆ ಇಲ್ಲಿನ ಆಡಳಿತ ಸೂಚಿಸಿದೆ. ಈ ಕುರಿತು ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಪತ್ರ ಬರೆದಿರುವ ಗೃಹ ಸಚಿವೆ ಸುಯೆಲ್ಲಾ ಬ್ರೇವರ್‌ಮೆನ್,‘ಪ್ಯಾಲೆಸ್ತೀನ್ ಪರ ಬೆಂಬಲ ಸೂಚಿಸುವ ಮೂಲಕ ಹಮಾಸ್‌ಗೆ ಬೆಂಬಲ ನೀಡುವುದು ಕಾನೂನಿಗೆ ವಿರುದ್ಧವಾಗಿದೆ. ಇದನ್ನೆನಾದರು ಮಾಡಿದ್ದಲ್ಲಿ ಪೊಲೀಸರು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೇ ಅರಬ್ ವಿರುದ್ಧ ಮೆರವಣಿಗೆಗಳನ್ನು ನಿಲ್ಲಿಸುವಂತೆ ಕೋರಿದ್ದಾರೆ.