ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ: ಅಮೆರಿಕ

KannadaprabhaNewsNetwork |  
Published : May 10, 2024, 11:45 PM IST
ಮ್ಯಾಥ್ಯೂ ಮಿಲ್ಲರ್ | Kannada Prabha

ಸಾರಾಂಶ

ಭಾರತೀಯ ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂಬ ರಷ್ಯಾದ ಆರೋಪವನ್ನು ಅಮೆರಿಕ ಗುರುವಾರ ತಳ್ಳಿಹಾಕಿದೆ.

ಪಿಟಿಐ ವಾಷಿಂಗ್ಟನ್‌: ಭಾರತೀಯ ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ ಎಂಬ ರಷ್ಯಾದ ಆರೋಪವನ್ನು ಅಮೆರಿಕ ಗುರುವಾರ ತಳ್ಳಿಹಾಕಿದೆ.

ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇಲ್ಲ, ಖಂಡಿತವಾಗಿಯೂ, ನಾವು ಭಾರತದಲ್ಲಿನ ಚುನಾವಣೆಗಳಿಗೆ ಕೈ ಹಾಲ್ಲ. ಏಕೆಂದರೆ ನಾವು ಜಗತ್ತಿನ ಯಾವಚುನಾವಣೆಯಲ್ಲೂ ಹಸ್ತಕ್ಷೇಪ ಮಾಡಲ್ಲ. ಅದು ಭಾರತದ ಜನರು ತೆಗೆದುಕೊಳ್ಳಬೇಕಾದ ನಿರ್ಧಾರಗಳು ”ಎಂದರು.ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನು ಹತ್ಯೆಯ ಸಂಚಿನಲ್ಲಿ ಭಾರತದ ರಾ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಹಾಗೂ ಅಮೆರಿಕವು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮರಿಯಾ ಜಖರೋವಾ ಆರೋಪಿಸಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತೀಯ ಹಡಗಿನ ಮೇಲೆ ಇರಾನ್ ಆಕ್ರಮಣ : 20 ನಾವಿಕರ ರಕ್ಷಣೆ
ಗೂಗಲ್‌, ಮೈಕ್ರೋಸಾಫ್ಟ್‌ ನಮ್ಮ ಮುಂದಿನ ದಾಳಿ ಗುರಿ : ಇರಾನ್‌!