ನಮ್ಮ ಬಳಿ ನಿಗೂಢ ಆಸ್ತ್ರ ಇದೆ:ಅಮೆರಿಕ ಉಪಾಧ್ಯಕ್ಷ ಎಚ್ಚರಿಕೆ- ಇರಾನ್‌ ಡೀಲ್‌ಗೆ ಬರದಿದ್ರೆ ಈವರೆಗೆ ಬಳಸದ ಅಸ್ತ್ರ ಬಳಕೆ- ಟ್ರಂಪ್‌ ನಾಗರಿಕತೆ ನಾಶ ಎಚ್ಚರಿಕೆ ಬಳಿಕ ವ್ಯಾನ್ಸ್‌ ಬೆದರಿಕೆ

KannadaprabhaNewsNetwork |  
Published : Apr 08, 2026, 01:15 AM IST
ವ್ಯಾನ್ಸ್  | Kannada Prabha

ಸಾರಾಂಶ

‘ಇರಾನ್‌ ನಾವು ವಿಧಿಸಿದ ಗಡುವಿನ ಒಳಗೆ ಒಪ್ಪಂದ ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ನಮ್ಮ ಬತ್ತಳಿಕೆಯಲ್ಲಿ ಈವರೆಗೂ ಬಳಸದೇ ಇರುವ ಶಸ್ತ್ರಾಸ್ತ್ರಗಳಿವೆ. ಅವನ್ನು ಆಗ ಬಳಕೆ ಮಾಡಬೇಕಾಗಬಹುದು. ಅಂಥ ಸಂದರ್ಭ ಬರಲಿಕ್ಕಿಲ್ಲ ಎಂದುಕೊಂಡಿದ್ದೇನೆ’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಎಚ್ಚರಿಕೆಯ ಮಾತು ಆಡಿದ್ದಾರೆ.

- ನಮ್ಮ ಟೂಲ್‌ಕಿಟ್‌ನಲ್ಲಿ ನಾವು ಇದುವರೆಗೂ ಬಳಸದೇ ಇರುವ ಅಸ್ತ್ರಗಳಿಗೆ

- ಇರಾನಿಯನ್ನರು ನಡವಳಿಕೆ ಬದಲಿಸದಿದ್ರೆ ಅಸ್ತ್ರ ಬಳಕೆ ಬಗ್ಗೆ ಟ್ರಂಪ್‌ ನಿರ್ಧಾರ

- ಸೋಮವಾರದ ಗಡುವಿಗೂ ಮುನ್ನ ಇರಾನ್‌ಗೆ ಅಮೆರಿಕ ಉಪಾಧ್ಯಕ್ಷ ಎಚ್ಚರಿಕೆ

- ಆದರೆ ಈಗಲೂ ಇರಾನ್‌ ಜೊತೆ ಮಾತುಕತೆ ಫಲಪ್ರದವಾಗುವ ನಿರೀಕ್ಷೆ ಇದೆವಾಷಿಂಗ್ಟನ್: ‘ಇರಾನ್‌ ನಾವು ವಿಧಿಸಿದ ಗಡುವಿನ ಒಳಗೆ ಒಪ್ಪಂದ ಮಾಡಿಕೊಳ್ಳಬೇಕು. ಇಲ್ಲದೇ ಹೋದರೆ ನಮ್ಮ ಬತ್ತಳಿಕೆಯಲ್ಲಿ ಈವರೆಗೂ ಬಳಸದೇ ಇರುವ ಶಸ್ತ್ರಾಸ್ತ್ರಗಳಿವೆ. ಅವನ್ನು ಆಗ ಬಳಕೆ ಮಾಡಬೇಕಾಗಬಹುದು. ಅಂಥ ಸಂದರ್ಭ ಬರಲಿಕ್ಕಿಲ್ಲ ಎಂದುಕೊಂಡಿದ್ದೇನೆ’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಎಚ್ಚರಿಕೆಯ ಮಾತು ಆಡಿದ್ದಾರೆ.ಮಂಗಳವಾರ ಮಾತನಾಡಿದ ಅವರು, ‘ನಮ್ಮ ಟೂಲ್‌ಕಿಟ್‌ನಲ್ಲಿ ನಾವು ಇಲ್ಲಿಯವರೆಗೆ ಬಳಸಲು ನಿರ್ಧರಿಸದ ಸಾಧನಗಳಿವೆ ಎಂದು ಅವರು (ಇರಾನ್‌) ತಿಳಿದಿರಬೇಕು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಷ್ಟು ಸಮರ ಸಾರುವ ಸಂಪೂರ್ಣ ಅಧಿಕಾರವನ್ನು ಹೊಂದಿದ್ದಾರೆ. ಇರಾನಿಯನ್ನರು ತಮ್ಮ ನಡವಳಿಕೆಯನ್ನು ಬದಲಾಯಿಸದಿದ್ದರೆ ಅವರು ಅವುಗಳನ್ನು ಯಾವಾಗ ಬಳಸಬೇಕು ಎಂಬುನ್ನು ನಿರ್ಧರಿಸುತ್ತಾರೆ’ ಎಂದರು.

ಆದಾಗ್ಯೂ ಈಗಲೂ ಕೂಡ ಇರಾನ್ ಜತೆಗೆ ಮಾತುಕತೆ ಫಲಪ್ರದವಾಗುವ ವಿಶ್ವಾಸವಿವೆ. ಟ್ರಂಪ್‌ ವಿಧಿಸಿದ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8ರ ಗಡುವಿನ ಒಳಗೆ (ಭಾರತ ಕಾಲಮಾನ ಬುಧವಾರ ನಸುಕಿನ 5.30) ಇರಾನಿಯನ್ನರು ಒಪ್ಪಂದಕ್ಕೆ ಬರುವ ನಿರೀಕ್ಷೆ ಇದೆ. ಯಾವುದೇ ಸೇನಾ ಕ್ರಮ ಕೈಗೊಳ್ಳುವ ಮೊದಲು ನಾವು ಮಾತುಕತೆಯತ್ತ ಗಮನ ಹರಿಸುತ್ತೇವೆ. ನಾವು ನಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡ ಶಸ್ತ್ರಾಸ್ತ್ರಗಳನ್ನು ಬಳಸುವ ಪ್ರಮೇಯ ಬರಲಿಕ್ಕಿಲ್ಲ ಎಂದುಕೊಂಡಿದ್ದೇವೆ’ ಎಂದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬ್ಯುಸಿನೆಸ್‌ ಕಾರಿಡಾರ್‌ ಯೋಜನೆಗೆ ಬಿಡಿಎದಿಂದ ಟೆಂಡರ್‌
ಚಂದ್ರನತ್ತ 4 ಗಗನಯಾನಿಗಳ ಐತಿಹಾಸಿಕ ಪ್ರಯಾಣ ಆರಂಭ