ಅಡಕೆಯ ತಟ್ಟೆಗಳಲ್ಲಿ ಕ್ಯಾನ್ಸರ್‌ ಅಂಶ : ಅಮೆರಿಕ ಸುಳ್ಳು ಕ್ಯಾತೆ

KannadaprabhaNewsNetwork |  
Published : May 28, 2025, 11:55 PM ISTUpdated : May 29, 2025, 04:08 AM IST
ಅಡಕೆ ಹಾಳೆ ತಟ್ಟೆ | Kannada Prabha

ಸಾರಾಂಶ

ಅಡಕೆ ಹಾಳೆಯಿಂದ ಮಾಡುವ ತಟ್ಟೆ, ಬಟ್ಟಲು, ಚಮಚಗಳ ಮೇಲೆ ಅಮೆರಿಕ ಪ್ರಹಾರ ಬೀಸಿದೆ. ಅಡಕೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ ಕಾರಕ, ಜೀವಕೋಶಕ್ಕೆ ಹಾನಿ ಮಾಡುವಂತಹ ಅಂಶ ಪತ್ತೆಯಾಗಿದೆ. ಹೀಗಾಗಿ ಈ ಬಗ್ಗೆ ಆಮದು ಮಾಡುವವರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.

 ನವದೆಹಲಿ: ಅಡಕೆ ಹಾಳೆಯಿಂದ ಮಾಡುವ ತಟ್ಟೆ, ಬಟ್ಟಲು, ಚಮಚಗಳ ಮೇಲೆ ಅಮೆರಿಕ ಪ್ರಹಾರ ಬೀಸಿದೆ. ಅಡಕೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ ಕಾರಕ, ಜೀವಕೋಶಕ್ಕೆ ಹಾನಿ ಮಾಡುವಂತಹ ಅಂಶ ಪತ್ತೆಯಾಗಿದೆ. ಹೀಗಾಗಿ ಈ ಬಗ್ಗೆ ಆಮದು ಮಾಡುವವರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.

ಆದರೆ ಅಮೆರಿಕದ ನಡೆಗೆ ಕರ್ನಾಟಕ ಸೇರಿದಂತೆ ಭಾರತದ ಹಲವು ಕಡೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ವರದಿಯು ಅವೈಜ್ಞಾನಿಕವಾಗಿದ್ದು, ಅಡಕೆ ಹಾಳೆಯ ಉತ್ಪನ್ನಗಳು ಆರೋಗ್ಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಅವುಗಳು ಪರಿಸರ ಸ್ನೇಹಿ ಆಗಿದೆ ಎಂದಿದ್ದಾರೆ.

ಅಪಾಯಕಾರಿ:

ಅಮೆರಿಕದ ಆಹಾರ ಮತ್ತು ಭದ್ರತಾ ಇಲಾಖೆ (ಎಫ್‌ಡಿಎ) ನಡೆಸಿದ ಸಂಶೋಧನೆಯಲ್ಲಿ ಅಡಕೆ ತಟ್ಟೆಗಳಲ್ಲಿರುವ ಕಪ್ಪು ಅಂಶಗಳಲ್ಲಿ ಕ್ಯಾನ್ಸರ್‌ ಕಾರಕ ಪತ್ತೆಯಾಗಿರುವುದಾಗಿ ಹೇಳಿದೆ. ಈ ಅಂಶಗಳು ಆಹಾರದ ಜೊತೆಗೆ ಬೆರೆತು ಬಳಕೆದಾರರ ಆರೋಗ್ಯದಲ್ಲಿ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಹೀಗಾಗಿ ಅವುಗಳ ಆಮದುದಾರರು, ಮಾರಾಟಗಾರರಿಗೆ ‘ಇಂಪೋರ್ಟ್‌ ಅಲರ್ಟ್’ ಘೋಷಿಸಿದೆ. ಹೀಗೆಂದರೆ, ಈ ವಸ್ತುಗಳು ಬಳಕೆಗೆ ಯೋಗ್ಯವಲ್ಲದ್ದಾಗಿದ್ದು, ಇವುಗಳನ್ನು ಆಮದು ಮಾಡಿಕೊಳ್ಳುವ ಮುನ್ನ ಯೋಚಿಸಿ ಎಚ್ಚರಿಕೆ ಇರಲಿ ಎಂದರ್ಥ.

ಕರ್ನಾಟಕದಿಂದ ಸಾಕಷ್ಟು ಪ್ರಮಾಣದಲ್ಲಿ ವಿದೇಶಗಳಿಗೆ ಅಡಕೆ ಹಾಳೆಯ ಉತ್ಪನ್ನ ರಫ್ತಾಗುತ್ತದೆ. ಇದೀಗ ಅಮೆರಿಕದ ಎಚ್ಚರಿಕೆಯ ಪರಿಣಾಮ ಕರ್ನಾಟಕ ಸೇರಿ ದೇಶೀಯ ರಫ್ತಿನ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ಅಡಕೆ ತಟ್ಟೆ ಮಾರುಕಟ್ಟೆ ಸುಮಾರು 170 ಕೋಟಿ ರು.ನಷ್ಟಿದೆ. ಚೀನಾದ ಕಬ್ಬಿನ ಪ್ಲೇಟ್‌ನದ್ದು 8500 ಕೋಟಿ ಉದ್ಯಮವಾಗಿದೆ. ಅಂದರೆ 2ನೇ ಸ್ಥಾನದಲ್ಲಿ ಅಡಕೆ ಹಾಳೆಯ ಉತ್ಪನ್ನಗಳಿವೆ. ಈಗಾಗಲೇ ಆಸ್ಟ್ರೇಲಿಯಾ, ಬ್ರಿಟನ್‌ ಮತ್ತು ಕೆನಡಾ ದೇಶಗಳು ಅಡಕೆ ಹಾಳೆಯ ಉತ್ಪನ್ನಗಳ ಮೇಲೆ ನಿಷೇಧ ಹೇರಿದೆ.

ಅಮೆರಿಕದ ಕ್ಯಾತೆ ಏನು?

- ಅಡಕೆ ತಟ್ಟೆಗಳಲ್ಲಿನ ಕಪ್ಪು ಅಂಶಗಳಲ್ಲಿ ಕ್ಯಾನ್ಸರ್‌ ಕಾರಕ ಪತ್ತೆ, ಇದರಿಂದ ಆರೋಗ್ಯಕ್ಕೆ ಅಪಾಯ

- ಈ ಕ್ಯಾನ್ಸರ್‌ ಕಾರಕ ಅಂಶಗಳು ಊಟ-ತಿಂಡಿಗಳಲ್ಲಿ ಬೆರೆತು ದೇಹದಲ್ಲಿ ಪ್ರವೇಶಿಸಿದರೆ ಡೇಂಜರ್‌

- ನಮ್ಮ ಸಂಶೋಧನೆಯಲ್ಲಿ ಬಹಿರಂಗ: ಅಮೆರಿಕದ ಆಹಾರ ಮತ್ತು ಭದ್ರತಾ ಇಲಾಖೆ ಹೇಳಿಕೆ

- ಈ ಸಂಶೋಧನೆ ಸುಳ್ಳು: ಅಡಕೆ ತಟ್ಟೆಗಳನ್ನು ಹೆಚ್ಚು ಪೂರೈಸುವ ಕರ್ನಾಟಕ ರೈತರ ಕಿಡಿ

- ಅಡಕೆ ತಟ್ಟೆಗಳು ಪರಿಸರ ಜನ್ಯ ಹಾಗೂ ಪರಿಸರ ಸ್ನೇಹಿ: ಅಡಕೆ ಬೆಳೆಗಾರಿಂದ ಸ್ಪಷ್ಟೀಕರಣ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ