ನಾಸಿಕ್: ಮನೆಯೊಳಗೆ ಚಿರತೆ ನುಗ್ಗಿದ ಹೊರತಾಗಿಯೂ ಯಾವುದೇ ಆತಂಕಕ್ಕೆ ಒಳಗಾಗದೇ ಬಾಲಕ ಸಮಯಪ್ರಜ್ಞೆ ತೋರಿ ತನ್ನ ಜೀವ ಉಳಿಸಿಕೊಂಡ ಘಟನೆ ಮಧ್ಯಪ್ರದೇಶ ನಾಸಿಕ್‌ನಲ್ಲಿ ನಡೆದಿದೆ. ಆತನ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮೋಹಿತ್ ಎಂಬ 12 ವರ್ಷದ ಬಾಲಕನೊಬ್ಬ ತನ್ನ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುವ ಕಟ್ಟಡದ ಕಚೇರಿಯಲ್ಲಿ ಮೊಬೈಲ್‌ನಲ್ಲಿ ಆಟವಾಡುತ್ತಾ ಕುಳಿತಿದ್ದ. ಈ ವೇಳೆ ಏಕಾಏಕಿ ಚಿರತೆಯೊಂದು ಕಚೇರಿಗೆ ನುಗ್ಗಿದೆ. ಆದರೆ ಅದು ಬಾಗಿಲ ಬಳಿಯೇ ಕುಳಿತಿದ್ದ ಬಾಲಕನನ್ನು ಗಮನಿಸದೇ ಒಳಗೆ ಹೋಗಿದೆ.
ಈ ವೇಳೆ ಸ್ವಲ್ಪವೂ ಆತಂಕಕ್ಕೆ ಒಳಗಾಗದ ಬಾಲಕ ನಿಧಾನವಾಗಿ ಎದ್ದು ಬಾಗಿಲು ಎಳೆದು ಹೊರಗಿನಿಂದ ಲಾಕ್ ಮಾಡಿ ತಂದೆಗೆ ಮಾಹಿತಿ ನೀಡಿದ್ದಾನೆ.