;Resize=(412,232))
ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡಬೇಕೆಂಬುದು ಅಮೆರಿಕದ ಪ್ರಮುಖ ಷರತ್ತಾಗಿತ್ತು. ಆದರೆ, ಮಾತುಕತೆ ವೇಳೆ ಈ ವಿಚಾರದಲ್ಲಿ ಇರಾನ್‌ನಿಂದ ಸ್ಪಷ್ಟ ಬದ್ಧತೆ ಸಿಕ್ಕಿಲ್ಲ
ಅಣುಯೋಜನೆ, ಹೋರ್ಮುಜ್ ಜಲಸಂಧಿ ಮುಕ್ತ ಸೇರಿ ವಿವಿಧ ವಿಚಾರಗಳಲ್ಲಿ ಅಮೆರಿಕವು ಇರಾನ್ ಮುಂದೆ ಅತಿಯಾದ ಷರತ್ತುಗಳನ್ನು ಮುಂದಿಟ್ಟಿತ್ತು.
3 ನಿರ್ಬಂಧ, ಆಸ್ತಿ ಬಿಡುಗಡೆ ಗೊಂದಲ
ಕತಾರ್ ಸೇರಿ ವಿದೇಶಗಳಲ್ಲಿರುವ ಇರಾನ್‌ನ ಆಸ್ತಿ, ಹಣವನ್ನು ಅಮೆರಿಕ ಮುಟ್ಟುಗೋಲು ಹಾಕಿದ್ದು, ಅವುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಇರಾನ್ ಪಟ್ಟುಹಿಡಿದಿದೆ. ಆದರೆ, ತಕ್ಷಣಕ್ಕೆ ಅವುಗಳನ್ನು ಬಿಡುಗಡೆ ಮಾಡುವ ಸಂಬಂಧ ಅಮೆರಿಕ ಅಧಿಕಾರಿಗಳಿಂದ ಯಾವುದೇ ಭರವಸೆ ಸಿಗಲಿಲ್ಲ.
3 ಹೋರ್ಮುಜ್ ಸಮಸ್ಯೆ
ಹೋರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವುದಾಗಿ ಇರಾನ್ ತಿಳಿಸಿದರೆ, ಅಮೆರಿಕದ ನಿಯೋಗ ಇದನ್ನು ವಿರೋಧಿಸಿತು. ಜತೆಗೆ, ಜಲಸಂಧಿಯನ್ನು ತಕ್ಷಣ ಎಲ್ಲಾ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಪಟ್ಟುಹಿಡಿಯಿತು. ಆದರೆ, ಇದಕ್ಕೆ ಇರಾನ್ ಒಪ್ಪಲಿಲ್ಲ ಎಂದು ಹೇಳಲಾಗಿದೆ.
4 ಲೆಬನಾನ್ ಮೇಲೆ ದಾಳಿ ನಿಲ್ಲಿಸಲು ಆಗ್ರಹ
2 ವಾರಗಳ ಕದನ ವಿರಾಮ ಲೆಬನಾನ್‌ಗೂ ಅನ್ವಯಿಸಬೇಕು. ಅಮೆರಿಕ, ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದಾದ ಹಾನಿ ಭರಿಸಿಕೊಡಬೇಕು ಎಂದು ಇರಾನ್ ಪಟ್ಟುಹಿಡಿದಿತ್ತು. ಆದರೆ, ಇದಕ್ಕೆ ಅಮೆರಿಕದಿಂದ ಸ್ಪಷ್ಟ ಭರವಸೆ ಸಿಕ್ಕಿಲ್ಲ.
5 ವಿಶ್ವಾಸದ ಕೊರತೆ
ಮಾತುಕತೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಪಾಕಿಸ್ತಾನದ ಮೂಲಗಳ ಪ್ರಕಾರ ಎರಡೂ ಕಡೆಯವರ ನಡುವೆ ವಿಶ್ವಾಸದ ಕೊರತೆ ಇತ್ತು. ಕೆಲ ವಿಚಾರಗಳ ಚರ್ಚೆಯ ವೇಳೆ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಇರಾನ್ ನಿಯೋಗವು ಯುದ್ಧದಿಂದಾದ ಮಕ್ಕಳು, ಸಾರ್ವಜನಿಕರ ಸಾವು-ನೋವನ್ನು ಜಗತ್ತಿನ ಮುಂದೆ ಪ್ರದರ್ಶಿಸಲು ಮುಂದಾಯಿತು. ತಾವು ಆಗಮಿಸಿದ್ದ ವಿಮಾನಗಳ ಖಾಲಿ ಸೀಟುಗಳನ್ನು ಯುದ್ಧದಲ್ಲಿ ಮೃತಮಕ್ಕಳ ಫೋಟೋ ಇಟ್ಟು ಅಮೆರಿಕಕ್ಕೆ ಇರಿಸು-ಮುರುಸು ಉಂಟು ಮಾಡಿತ್ತು. ಜತೆಗೆ, ಸಂಧಾನಕ್ಕೂ ಮೊದಲು ಹಿಡಿದುಕೊಂಡು ಬಂದಿದ್ದ ಪಟ್ಟಿಯ ವಿಚಾರವಾಗಿ ಎರಡೂ ದೇಶಗಳು ಹಿಡಿದ ಪಟ್ಟು ಸಡಿಲಿಸುವ ಪ್ರಯತ್ನ ನಡೆಸಲಿಲ್ಲ.