ಗ್ರಾಮೀಣ ಕ್ರೀಡಾಪಟುಗಳು ತಮ್ಮಲ್ಲಿನ ಪ್ರತಿಭೆ ಅನಾವರಣ ಮಾಡಲು ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿ ಆಗಲಿವೆ. ಆರೋಗ್ಯದ ಹಿತದೃಷ್ಟಿಯಿಂದ ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆ ಉತ್ತಮ ಬೆಳವಣಿಗೆ. ಟೂರ್ನಿಯಲ್ಲಿ ಭಾಗವಹಿಸಿರುವ ಎಲ್ಲಾ ಆಟಗಾರರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಮೆರೆಯಬೇಕು ಎಂದು ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಡಿ.ಕೃಷ್ಣೇಗೌಡ ಸಲಹೆ ನೀಡಿದರು.

ಸಮೀಪದ ಬೆಳತೂರು ಗ್ರಾಮದ ಹೊರವಲಯದಲ್ಲಿ ಜಯಸಿಂಹ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.

ದಸಂಸ ರಾಜ್ಯ ಸಂಚಾಲಕ ಸಾಗ್ಯ ಕೆಂಪಯ್ಯ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳು ತಮ್ಮಲ್ಲಿನ ಪ್ರತಿಭೆ ಅನಾವರಣ ಮಾಡಲು ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿ ಆಗಲಿವೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಮೊಳೆದೊಡ್ಡಿ ಲಿಂಗರಾಜು ಮಾತನಾಡಿ, ಆರೋಗ್ಯದ ಹಿತದೃಷ್ಟಿಯಿಂದ ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಪ‌.ಜಾ‌ ಸೇವಾ ಟ್ರಸ್ಟ್ ಗೌರವ ಅಧ್ಯಕ್ಷ ಬಿ.ಎಂ.ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಪಿ.ವೀರಭದ್ರಪ್ಪ, ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಅಧ್ಯಕ್ಷ ಮಾದೇಶ್, ಗ್ರಾಪಂ ಸದಸ್ಯ ಪ್ರಕಾಶ್, ಪಕ್ಷದ ಮುಖಂಡರಾದ ಎಚ್.ಕೆ.ಕೃಷ್ಣಮೂರ್ತಿ, ಹುಲ್ಲಾಗಾಲ ಎಂ.ಶಿವಕುಮಾರ್, ಸುನೀಲ್, ಪವಿತ್ರ, ನಾಗೇಗೌಡ, ಸುರೇಶ್, ಚಿಕ್ಕಬೋರಯ್ಯ, ಡಾ.ಲತಾ, ರಾಣಿ, ಕಲಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.ಜ.21ರಿಂದ 23ರವರೆಗೆ ಮಾರಮ್ಮ ದೇವಿ ಪೂಜಾ ಮಹೋತ್ಸವ

ಮಳವಳ್ಳಿ:

ತಾಲೂಕಿನ ಚಿಕ್ಕೇಗೌಡನದೊಡ್ಡಿ ಮಾರಮ್ಮ ದೇವಾಲಯದ ಪ್ರತಿಷ್ಠಾಪನ ಪೂಜಾ ಮಹೋತ್ಸವವು ಜ.21 ರಿಂದ 23ರವರೆಗೆ ಭಕ್ತಿ ಪ್ರಧಾನವಾಗಿ ನರೆವೇರಲಿದೆ.

ಜ.21ರಂದು ಗಣಾಪೂಜೆ, ಗೋ ಪೂಜೆ, ದ್ವಾರಪಾಲಕ ಪೂಜೆ, ದೇವಾಲಯ ಶುದ್ಧಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆಯಲಿವೆ. ಜ.22ರಂದು ಆದಿಶಕ್ತಿ ಉಮಾ ಮಹೇಶ್ವರಿ ಲಕ್ಷ್ಮಿ ನಾರಾಯಣ ಸಹಿತ ಕಳಸಪೂಜೆ, ಹೋಮ ಹವನ, 22 ದೇವರುಗಳು ಆಗಮನ, ಮಾರಮ್ಮ ವಿಗ್ರಹ ಸಂಸ್ಕಾರ ನಿದ್ರಾದಿ ವಾಸ ಪೂಜೆ, ವಾಸ್ತು ಬಲಿ, ಪಾಕಾ ಕೈಂಕರ್ಯಗಳು ಜರುಗಲಿದೆ.

ಜ.23ರಂದು ಮಾರಮ್ಮ ಪ್ರತಿಷ್ಠಾಪನೆ, ಅಷ್ಟೋತ್ತರ ನೈವೇದ್ಯ ಸಮರ್ಪಣೆ, ಕಳಸರೋಹನ, ನಡೆಯಲಿದೆ. ಮಹದೇಶ್ವರ ಕಲ್ಯಾಣ ಮಂಟಪದಿಂದ ದೇವರುಗಳ ಹೂವು ಹೊಂಬಾಳೆ, ಏಳುಮಡಿ, ಬಸವನ ಮೇಲೆ ಮಜ್ಜನ, 101 ಕಳಸ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣನವರ ಬೆಳ್ಳಿ ರಥೋತ್ಸವ ಹಾಗೂ ದೇವರ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.