95 ಮಂದಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ ಪ್ರದಾನ

| Published : Nov 02 2025, 02:00 AM IST

ಸಾರಾಂಶ

ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರನ್ನು ಸನ್ಮಾನಿಸಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಕೆ.ಹರೀಶ್ ಗೌಡ, ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್ ಇತರರು.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾಡಳಿತವು ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ 95 ಮಂದಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಕೆ.ಹರೀಶ್ ಗೌಡ, ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್ ಅವರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರನ್ನು ಸನ್ಮಾನಿಸಿದರು.

ಸಮಾಜ ಸೇವೆಯಲ್ಲಿ ಸ್ನೇಕ್‌ ಶ್ಯಾಮ್‌, ಕೆ.ಟಿ. ಕೃಷ್ಣಪ್ಪ, ಲಕ್ಕೇಗೌಡ, ಎಸ್‌. ವೆಂಕಟೇಶ್‌, ಪಿ. ಮರಂಕಯ್ಯ, ಮೈಸೂರು ಉಮೇಶ್‌, ಕೆ.ವಿ. ಮಲ್ಲೇಶ್‌, ಕೆ.ಬಿ. ಲಿಂಗರಾಜು, ಸಿ. ರೇಣುಕಾಂಬ, ರಾ. ಸುರೇಶ್‌, ಬಿ.ಸಿ. ನಂದೀಶ, ಎಂ.ಜಿ. ಚಿಕ್ಕಣ್ಣ, ಎ. ನಾರಾಯಣ ರೈ, ತಿಮ್ಮಯ್ಯ, ಟೀಂ ಮೈಸೂರು ಪ್ರತಿಷ್ಠಾನ (ಗೋಕುಲ್‌), ಜಿ. ನಾಗರಾಜು, ಎನ್‌. ಮಹದೇವಸ್ವಾಮಿ, ಮೊಗಣ್ಣ, ಎಸ್. ನಾಗೇಶ್‌ ಯಾದವ್‌, ಆರ್‌. ಯಶೋಧ, ಎಂ.ಮೊಗಣ್ಣಚಾರ್‌, ಎಚ್.ಎಸ್. ಚಂದ್ರಶೇಖರ್‌, ಕೆ.ಪಿ. ಯೋಗೇಶ್‌, ಡಿ. ಮಂಜುನಾಥ್‌, ರದಿಉಲ್ಲಾ ಖಾನ್‌, ಎಂ. ಮಹದೇವ.

ಪತ್ರಿಕೋದ್ಯಮದಲ್ಲಿ ಶೇಖರ್‌ ಕಿರುಗುಂದ, ವಿ.ವೀರಭದ್ರಪ್ಪ ಬಿಸ್ಲಳ್ಳಿ, ಎಂ. ಮಹೇಶ್‌ ಭಗೀರಥ, ಎಂ.ಟಿ. ಯೋಗೇಶ್‌ ಕುಮಾರ್‌, ಕೆ.ಬಿ. ರಮೇಶ ನಾಯಕ, ಎಸ್‌.ಆರ್‌. ಶಿವಕುಮಾರ್‌, ಎಚ್.ಎಸ್. ದಿನೇಶ್ ಕುಮಾರ್‌, ಧರ್ಮಾಪುರ ನಾರಾಯಣ್‌, ದಯಾಶಂಕರ್‌ ಮೈಲಿ, ಪತ್ರಿಕಾ ಛಾಯಾಗ್ರಹಣದಲ್ಲಿ ಹಂಪಾ ನಾಗರಾಜ್‌, ಎಂ.ಎ. ಶ್ರಿರಾಮ್‌, ವನ್ಯಜೀವಿ ಛಾಯಾಗ್ರಹಣದಲ್ಲಿ ಜಿ.ಎಸ್‌. ರವಿಶಂಕರ್‌, ದೃಶ್ಯಮಾಧ್ಯಮ ಛಾಯಾಗ್ರಹಣದಲ್ಲಿ ಈ. ಕಾರ್ತಿಕ್‌,

ಶಿಕ್ಷಣ ಕ್ಷೇತ್ರದಲ್ಲಿ ಬಿ.ಆರ್‌.ವಾಣಿ, ಬಿ.ಕೆ. ಜ್ಞಾನಪ್ರಕಾಶ್‌, ಗೌಡಯ್ಯ, ಎಚ್‌.ಎಚ್‌. ಲಿಂಗರಾಜೇಗೌಡ, ಎಂ.ವಿ. ತ್ಯಾಗರಾಜ, ರೇಣುಕಾ, ಎಲ್. ಮಂಜುಳಾಕ್ಷಿ, ಡಾ. ವಿಜಯಲಕ್ಷ್ಮಿ ಮಾನಾಪುರ, ಎಂ.ಡಿ. ಗೋಪಿನಾಥ್‌.

ರಂಗಭೂಮಿಯಲ್ಲಿ ಡಿ. ತಿಪ್ಪಣ್ಣ, ದೀಪಕ್‌, ಬಿ. ದೊರೆಸ್ವಾಮಿ, ಡಿ. ನಾಗೇಂದ್ರಕುಮಾರ್‌, ನಾಗರಾಜ್‌ ಮಾಯಣ್ಣ, ಎ.ಸಿ. ರವಿ, ಎಸ್.ಎಲ್. ಕುಮಾರ (ಸಿದ್ದನಕೊಪ್ಪಲು). ಜನಪದದಲ್ಲಿ ಮೈಸೂರು ಉಮೇಶ್‌, ಮಂಚಮ್ಮ, ಸಿ. ಮಂಜುನಾಥ್‌, ಶ್ರೀನಿವಾಸಮೂರ್ತಿ, ಕನ್ನಡಪರ ಹೋರಾಟಗಾರರಾದ ಎಸ್‌.ಕೆ. ರಾಜೂಗೌಡ, ಕೆ. ಮಾದಪ್ಪ, ಡಿ. ನಾಗರಾಜು, ಬಿ.ಕೆ. ಜೈಕುಮಾರ್‌, ಪುರುಷೋತ್ತಮ್‌, ವೆಂಕಟೇಶ್‌, ನಂಜುಂಡ, ಸಿಂಧುವಳ್ಳಿ ಶಿವಕುಮಾರ್.

ಕ್ರೀಡೆಯಲ್ಲಿ ಎಂ.ಪಿ. ಅಜಿತ್‌, ಎಚ್‌.ಸಿ. ಸುರೇಶ್‌, ಎ.ಎಲ್‌. ಕೃಷ್ಣಸ್ವಾಮಿ, ಅಲೋಕ್‌ ಆರ್‌. ಜೈನ್‌, ಶ್ರಾವಣಿ ಶಿವಣ್ಣ, ರಚನಾ ನಾಗರಾಜ್‌ (ವಿಶೇಷ ಚೇತನ), ಟಿ.ಎಸ್‌. ರವಿ, ಯೋಗದಲ್ಲಿ ಸತ್ಯವತಿ, ಸಾಂಸ್ಕೃತಿಕ ಸಂಘಟನೆಯಲ್ಲಿ ನಾಗರಾಜ್‌ ವಿ. ಬೈರಿ, ಸಾಹಿತ್ಯ ಮತ್ತು ಸಂಘಟನೆಯಲ್ಲಿ ಪಿ. ಮರಡೇಶಮೂರ್ತಿ.

ಗಮಕದಲ್ಲಿ ಡಾ.ಕೃ.ಪಾ. ಮಂಜುನಾಥ್‌, ವೈದ್ಯಕೀಯ ಮತ್ತು ಸಾಹಿತ್ಯದಲ್ಲಿ ಡಾ.ಬಿ.ಎನ್. ರವೀಶ್‌, ಸಂಗೀತದಲ್ಲಿ ಕೆ. ಲಕ್ಷ್ಮಿ, ಬಿ. ರಶ್ಮಿ, ಎಚ್. ಸೌಭಾಗ್ಯಾ, ವಾದ್ಯ ಸಂಗೀತದಲ್ಲಿ ಅನುಷ್‌ ಎ. ಶೆಟ್ಟಿ, ಸಾಹಿತ್ಯದಲ್ಲಿ ಪ್ರೊ.ಎನ್.ಕೆ. ಲೋಲಾಕ್ಷಿ, ಪ್ರೇಮಾ ಮಾದಪ್ಪ, ಅದಿಬ್‌ ಅಖ್ತರ್‌, ರತ್ನಾ ಚಂದ್ರಶೇಖರ್‌, ನಾಗೇಂದ್ರದಪ್ಪ, ನಗರ್ಲೆ ಶಿವಕುಮಾರ್‌, ಧಾರ್ಮಿಕದಲ್ಲಿ ಎಂ. ರವಿಕುಮಾರ್‌, ವಯಸ್ಕರ ಸಾಕ್ಷರತೆ-ಸಂಕೀರ್ಣದಲ್ಲಿ ರಾಜಾ ಹೊಸಮಾಳ, ಸ್ವಚ್ಛತಾ ಸೇವೆ- ಸಂಕೀರ್ಣದಲ್ಲಿ ಭಾವಕ್ಕ, ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಮಂಗಳಾ ಮುದ್ದುಮಾದಪ್ಪ, ಸಾಂಸ್ಕೃತಿಕದಲ್ಲಿ ಆರ್. ಅಜಯ್‌ ಕುಮಾರ್‌ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.