ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್ ಮಂಗಳೂರು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಮಂಗಳೂರು: ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್ ಮಂಗಳೂರು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆಯಾಯಿತು.ಸರಣಿಯಡಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಘಟಕ ಉದ್ಘಾಟನೆಯು ಇಲ್ಲೇ ನಡೆಯಿತು.

ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ, ಮಂಗಳೂರು ನಗರದ ಡಿಸಿಪಿ ಮಿಥುನ್ ಉದ್ಘಾಟಿಸಿದರು.ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ರೈಟ್ ಗಾರ್ಡಿಯನ್ಸ್ ಎಂದು ಹೆಸರಿಸಲಾದ ಮಕ್ಕಳ ಹಕ್ಕುಗಳ ಕ್ಲಬ್ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಜವಾಬ್ದಾರಿ ಮತ್ತು ಹಕ್ಕು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಘೋಷವಾಕ್ಯ ಬರವಣಿಗೆಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.ಅದೇ ಸಂದರ್ಭದಲ್ಲಿ ಸಿವಿಲ್ ಸೇವೆಯಲ್ಲಿ ಅವಕಾಶಗಳು ವಿಷಯದ ಕುರಿತು ಮಾತನಾಡಿದ ಮಿಥುನ್ ಅವರು, ಸಿವಿಲ್ ಸರ್ವಿಸ್ ನಲ್ಲಿರುವ ಅವಕಾಶಗಳು ಬಗ್ಗೆ ಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಯ ರಚನೆ, ಅಗತ್ಯ ಶಿಸ್ತು, ಸೇವಾ ಮನೋಭಾವದವಮಹತ್ತ್ವ ಹಾಗೂ ಸಾರ್ವಜನಿಕ ಸೇವೆಗಳ ಮೌಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

ಗುರಿಯ ಸ್ಪಷ್ಟತೆ, ನಿಯಮಿತ ಪರಿಶ್ರಮ ಮತ್ತು ಸಮರ್ಪಣೆ ಇದ್ದರೆ ಸಿವಿಲ್ ಸೇವೆ ದೂರದ

ಕನಸಲ್ಲ. ಅವರು ಮಾತನಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳು ಕೇವಲ ಬೌದ್ಧಿಕ ಸಾಮರ್ಥ್ಯದ ಪರೀಕ್ಷೆಯಲ್ಲ, ಬದ್ಧತೆ, ನಿಯಮಿತ ಪರಿಶ್ರಮ ಮತ್ತು ದೇಶಸೇವೆಯ ಪ್ರಾಮಾಣಿಕ ಮನೋಭಾವ ಎಂದರು.

ಸ್ವತಃ ಎಕ್ಸ್‌ಪರ್ಟ್ ಕಾಲೇಜು ತಮ್ಮ ವ್ಯಕ್ತಿತ್ತ್ವ ವಿಕಸನಕ್ಕೆ ನೀಡಿದ ಕೊಡುಗೆ ನೆನಪಿಸಿಕೊಂಡು ಕುತೂಹಲ, ಸರಿಯಾದ ಗುರಿಯೊಂದಿಗೆ ನಿರಂತರ ಪ್ರಯತ್ನ ಮಾಡುವುದು ಯಶಸ್ಸಿನ ಮೂಲ ಎಂದು ಅವರು ಹೇಳಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ ನಿರ್ದೇಶ ಅಂಕುಶ್ ಎನ್. ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್ ಹಾಗೂ ಇನ್ನಿತರ ಉಪನ್ಯಾಸಕ ವೃಂದದವರು ಇದ್ದರು. ವಿದ್ಯಾರ್ಥಿನಿಯಾದ ವಂಶಿಕಾ ಅನಂತ ಪದ್ಮನಾಭ ನಿರೂಪಿಸಿ ವಂದಿಸಿದರು.