ಸಾರಾಂಶ
ಕನ್ನಡಪರ ಚಳವಳಿಗಾರರ ಹೋರಾಟದಿಂದ ಕನ್ನಡದ ನೈಜ ಆಸ್ಮಿತೆ ಉಳಿದಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡಪರ ಚಳವಳಿಗಾರರ ಹೋರಾಟದಿಂದ ಕನ್ನಡದ ನೈಜ ಆಸ್ಮಿತೆ ಉಳಿದಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದ್ದಾರೆ.ಭಾನುವಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ ಶಿವಗಂಗಾ ರಂಗಮಂದಿರದಲ್ಲಿ ರಂಗಮಂಡಲ, ಶುಭದ ಚಾರಿಟೇಬಲ್ ಟ್ರಸ್ಟ್, ಅಕ್ಷಯ ಸೇವಾ ಫೌಂಡೇಶನ್, ಸ್ನೇಹ ಸೇವಾ ಫೌಂಡೇಶನ್‌ಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ, ಕನ್ನಡ ಚಳವಳಿಗಾರ ಪಾಲನೇತ್ರ ಅಭಿನಂದನೆ ಹಾಗೂ ಕನ್ನಡ ಚಳವಳಿ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪರ ಹೋರಾಟಗಾರರ ತ್ಯಾಗ, ಸೇವೆ ಹಾಗೂ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಇದೇ ವೇಳೆ ಬಣ್ಣಿಸಿದರು.
ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕನ್ನಡ ಭಾಷೆಗೆ ಸುಮಾರು 2,500 ವರ್ಷಗಳ ಇತಿಹಾಸವಿದೆ. ರಾಜ್ಯವಾಗಿ ಅಸ್ತಿತ್ವಗೊಂಡ ನೆನಪಿಗೆ 70ನೇ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದ್ದರಿಂದ, ಇದು ಕನ್ನಡ ರಾಜ್ಯೋತ್ಸವವಲ್ಲ, ಕರ್ನಾಟಕ ರಾಜ್ಯೋತ್ಸವ. ಈಗಿನ ಕಾಲದಲ್ಲಿ ಆಚರಿಸುತ್ತಿರುವ ರಾಜ್ಯೋತ್ಸವ ಕೇವಲ ನಗೆಹಬ್ಬ, ಸಲ್ಲದ ನೃತ್ಯಗಳಿಗೆ ಸೀಮಿತವಾಗುತ್ತಿದೆ. ಇವು ರಾಜ್ಯೋತ್ಸವ ಆಚರಣೆಗೆ ಭೂಷಣವಲ್ಲ ಎಂದರು.ನೆಲಮಂಗಲದ ಪವಾಡ ಶ್ರೀಬಸವಣ್ಣ ದೇವರ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪಾಲನೇತ್ರ ಅವರಂಥ ನೈಜ ಕನ್ನಡ ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆ ಸ್ಮರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎಚ್.ಎಸ್.ಸುಧೀಂದ್ರ ಕುಮಾರ್, ರಂಗ ಸಂಘಟಕ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಪ್ರಶಾಂತ ಶುಭದ, ಅಕ್ಷಯ್ ಸೇವಾ ಫೌಂಡೇಶನ್ ಅಧ್ಯಕ್ಷ ಡಾ.ಎಸ್.ಎಸ್.ಹಿರೇಮಠ, ಚಲನಚಿತ್ರ ನಟ ಆಸ್ಕರ್ ಕೃಷ್ಣ ಸೇರಿ ಇನ್ನಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))