ರಾಜ್ಯಗಳ ಗಡಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ

| Published : Mar 30 2024, 12:46 AM IST

ರಾಜ್ಯಗಳ ಗಡಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ತಮಿಳುನಾಡು ಉಭಯ ರಾಜ್ಯಗಳ ಗಡಿಭಾಗದಲ್ಲಿ ನಡೆಯುವ ಅಪರಾಧ ಮತ್ತು ಅಕ್ರಮ ಚಟುವಟಿಕೆ ತಡೆಗಟ್ಟಲು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಕಾರ ನೀಡಬೇಕು ಎಂದು ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಕರ್ನಾಟಕ ತಮಿಳುನಾಡು ಉಭಯ ರಾಜ್ಯಗಳ ಗಡಿಭಾಗದಲ್ಲಿ ನಡೆಯುವ ಅಪರಾಧ ಮತ್ತು ಅಕ್ರಮ ಚಟುವಟಿಕೆ ತಡೆಗಟ್ಟಲು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಕಾರ ನೀಡಬೇಕು ಎಂದು ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದ್ರ ತಿಳಿಸಿದರು. ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಾಗಮಲೆ ಭವನದಲ್ಲಿ ಆಯೋಜಿಸಲಾಗಿದ್ದ ತಮಿಳುನಾಡು ಹಾಗೂ ಕರ್ನಾಟಕ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಡಿ ಅಪರಾಧ ತಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಡಿ ಭಾಗದ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆಯುವ ಅಕ್ರಮ ಚಟುವಟಿಕೆ ಹಾಗೂ ಅಪರಾಧಗಳ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಹೆಚ್ಚು ಅರಣ್ಯ ಪ್ರದೇಶ ಕೂಡಿರುವ ಕರ್ನಾಟಕ ಹಾಗೂ ತಮಿಳುನಾಡಿನ ಎರಡು ರಾಜ್ಯಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆ ಹಾಗುವ ಅಪರಿಚಿತ ಶವಗಳು ಮತ್ತು ಇನ್ನಿತರ ಚಟುವಟಿಕೆಗಳ ಬಗ್ಗೆ ಪರಸ್ಪರ ಎರಡು ರಾಜ್ಯಗಳ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಕೆಲಸ ಮಾಡುವ ನಿಟ್ಟಿನಲ್ಲಿ ಕ್ರಮವಹಿಸ ಬೇಕಾಗಿದೆ ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಇರುವ ಗ್ರಾಮಗಳಲ್ಲಿಯೂ ಸಹ ಶಾಂತಿ ಸುವ್ಯವಸ್ಥೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸೂಚನೆ ನೀಡಿದರು.

ಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ:

ಉಭಯ ರಾಜ್ಯಗಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ ಹಾಗೂ ಇನ್ನಿತರ ಪದಾರ್ಥಗಳನ್ನು ದಾಖಲೆ ಇಲ್ಲದೆ ಸಾಗಣೆ ಮಾಡುವ ಬಗ್ಗೆ ಸೂಕ್ತವಾಗಿ ತಪಾಸಣೆ ಮಾಡಿ ಬಿಡಲು ಕ್ರಮವಹಿಸಬೇಕಾಗಿದೆ ಜೊತೆಗೆ ಗಡಿ ಗ್ರಾಮಗಳಲ್ಲಿಯೂ ಸಹ ಶಾಂತಿ ಸುವವ್ಯವಸ್ಥೆ ಕಾಪಾಡಲು ಸಹಕಾರ ನೀಡುವಂತೆ ಎರಡು ರಾಜ್ಯದ ಪೊಲೀಸ್ ಅಧಿಕಾರಿಗಳು ಪರಸ್ಪರ ಮಾತನಾಡಿದರು. ತಮಿಳುನಾಡಿನ ಭವಾನಿ ಹಂದಿಯೂರು ಉಪವಿಭಾಗದ ಡಿವೈಎಸ್ಪಿ ಅಮೃತವರ್ಷಿಣಿ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಪೊಲೀಸ್ ಬಂದ ಬಸ್ತ್ ಕಲ್ಪಿಸುವ ಮೂಲಕ ಪೊಲೀಸ್ ಠಾಣಾ ಸರಹದ್ದಿನ ವಿಭಾಗಗಳಲ್ಲಿಯೂ ಸಹ ಇಲಾಖೆ ವತಿಯಿಂದ ಪೊಲೀಸರನ್ನು ನಿಯೋಜಿಸಲಾಗಿದೆ. ಗಡಿ ಭಾಗದ ಪೊಲೀಸ್ ಠಾಣೆ ಸರಹತ್ತಿನಲ್ಲಿ ಕಳ್ಳ ಕಾಕರರ ಬಗ್ಗೆ ಮತ್ತು ಮರಣ ಹೊಂದಿದ ವ್ಯಕ್ತಿಗಳ ಬಗ್ಗೆ ನಿಖರ ಮಾಹಿತಿಯನ್ನು ಎರಡು ರಾಜ್ಯಗಳ ಪೊಲೀಸರು ಪರಸ್ಪರ ಮಾಹಿತಿ ನೀಡಿ ಸಹಕಾರ ನೀಡಬೇಕು ಅರಣ್ಯ ವಿಭಾಗ ಹೆಚ್ಚಾಗಿರುವುದರಿಂದ ಬೇಟೆಗಾರರ ಬಗ್ಗೆಯೂ ಸಹ ಹೆಚ್ಚಿನ ನಿಗ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲು ಪರಸ್ಪರ ಗಡಿ ಭಾಗದ ಅಧಿಕಾರಿಗಳು ಸಹಕಾರ ನೀಡುವಂತೆ ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಇನ್ಸ್ಪೆಕ್ಟರ್ ಗಳಾದ ಮನೋಜ್ ಕುಮಾರ್ ಶಶಿಕುಮಾರ್, ಶಿವಮಾದಯ್ಯ ಮತ್ತು ಪಿಎಸ್ಐ ಜಯರಾಮ್ ಹಾಗೂ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಭಾರತಿ ಡಿ ಆರ್ ಎಫ್ ಶಿವರಾಜ್ ಚೌಹಾಣ್ ಮತ್ತು ತಮಿಳುನಾಡಿನ ಹಂದಿ ಊರು ಕೊಳತೂರು ಮೇತೂರ್ ಹೊಗೇನಕಲ್ ವಿಭಾಗದ ಇನ್ಸ್ಪೆಕ್ಟರ್ಗಳಾದ ಸೆಂದಿಲ್ ಕುಮಾರ್ ಮಣಿ ಮಾರನ್ ಮೇಟೂರು ಅಲಗೂರಾಣಿ, ಪಿಎಸ್ಐ ಧನ ಪಾಲ್ ಉಪಸ್ಥಿತರಿದ್ದರು.