ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ತಾಲೂಕಿನಲ್ಲಿ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಂಚರಿಸುವಾಗ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ಪುರಸಭೆಯ ನೂತನ ಕಟ್ಟಡದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಫೆ.೧೦ ರಂದು ಸಂವಿಧಾನ ಜಾಥಾ ಮುತ್ತಗಿ ಗ್ರಾಮದಲ್ಲಿ ಪ್ರವೇಶವಾಗುವಾಗ ಅದ್ಧೂರಿಯಾಗಿ ಜಾಥಾವನ್ನು ಬರಮಾಡಿಕೊಳ್ಳಬೇಕು.
ಜಾಥಾ ಮೆರವಣಿಗೆ, ಸಭೆ ನಡೆದ ನಂತರ ಯರನಾಳದಲ್ಲಿ ಮೆರವಣಿಗೆ, ಸಭೆ ನಂತರ ಮನಗೂಳಿಯಲ್ಲಿ ಮೆರವಣಿಗೆ ಮಾಡಿ ನಂತರ ವಾಸ್ತವ್ಯ ಮಾಡಲಾಗುವುದು. ಫೆ.೧೧ ರಂದು ಉಕ್ಕಲಿ, ಡೋಣೂರ, ಮಸಬಿನಾಳ, ಬಸವನಬಾಗೇವಾಡಿಗಳಲ್ಲಿ, ಫೆ.೧೨ ರಂದು ದಿಂಡವಾರ, ವಡವಡಗಿ, ಕುದರಿಸಾಲವಾಡಗಿ, ಫೆ.೧೩ ರಂದು ಬ್ಯಾಕೋಡ, ಹುಣಶ್ಯಾಳ ಪಿಬಿ, ನರಸಲಗಿ, ಹೂವಿನಹಿಪ್ಪರಗಿ, ಫೆ.೧೪ ರಂದು ಮಣೂರ, ಕಣಕಾಲ ಗ್ರಾಮದಲ್ಲಿ ಜಾಥಾವು ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ನೀಡಿದರು. ಮುಖಂಡರಾದ ಪರಶುರಾಮ ದಿಂಡವಾರ, ವೈ.ಎಸ್.ಮ್ಯಾಗೇರಿ, ಅರವಿಂದ ಸಾಲವಾಡಗಿ, ಅಶೋಕ ಚಲವಾದಿ, ರಮಜಾನ ಹೆಬ್ಬಾಳ, ಮಹಾಂತೇಶ ಸಾಸಾಬಾಳ ಅವರು ಸಲಹೆ-ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭವಾನಿ ಪಾಟೀಲ, ತಾಲೂಕು ಪಂಚಾಯತಿ ಅಧಿಕಾರಿ ಡಾ.ಯುವರಾಜ ಹನಗಂಡಿ, ಪುರಸಭೆ ವ್ಯವಸ್ಥಾಪಕ ವೀರೇಶ ಹಟ್ಟಿ, ಮುಖಂಡರಾದ ಬಸಣ್ಣ ದೇಸಾಯಿ, ಸಂಜೀವ ಕಲ್ಯಾಣಿ, ಬಸವರಾಜ ಹಾರಿವಾಳ, ರಮೇಶ ಮ್ಯಾಗೇರಿ, ಪುರಸಭೆ ಸದಸ್ಯರಾದ ಅನ್ನಪೂರ್ಣ ಕಲ್ಯಾಣಿ, ಲಕ್ಷ್ಮೀಬಾಯಿ ಬೆಲ್ಲದ, ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ವಿವಿಧ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.