ಮತಯಂತ್ರ ತೆಗೆದುಕೊಂಡು ಹೋದ ಮತಗಟ್ಟೆ ಸಿಬ್ಬಂದಿ: ಗ್ರಾಮಸ್ಥರ ಸಂದೇಹರಾಂಪುರ ಗ್ರಾಮದಲ್ಲಿ 45 ಮತ್ತು 46 ಸಂಖ್ಯೆಯ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 46ನೇ ಮತಗಟ್ಟೆಯಲ್ಲಿ ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡಿತ್ತು. ಮತ್ತೊಂದು ಮತಗಟ್ಟೆಯಲ್ಲಿ ಮತದಾನ ಇನ್ನೂ ನಡೆಯುತಿತ್ತು. ಗ್ರಾಮದ ಮತಗಟ್ಟೆಯ ಬಳಿ ಬಸ್ಸು ಹೋಗುವುದಕ್ಕೆ ಸಾಧ್ಯವಿಲ್ಲದ ಕಾರಣ ಗ್ರಾಮದ ಮುಂಭಾಗ ಬಸ್‌ಗೆ ಮತಯಂತ್ರವನ್ನು ಜೀಪಿನ ಮೂಲಕ ತಂದು ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.