ಕನ್ನಡಪ್ರಭವಾರ್ತೆ ನಾಪೋಕ್ಲು
ಸಮೀಪದ ಪಾಲೂರು ಗ್ರಾಮದ ಗ್ರಾಮದೇವತೆಯಾದ ಶ್ರೀ ಕಾಳಿಕಾಂಬ ಅಮನೂರು ತಾಯಿಯ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ದೇವರ ಜಳಕ ಕೈಗೊಂಡರು. ಬಳಿಕ ವಾದ್ಯ ಮೇಲ ಹಾಗೂ ದೇವರ ಅಲಂಕೃತ ಮೂರ್ತಿಯೊಂದಿಗೆ ತಿರುವಳಕಾರರು ಭಕ್ತರು ಮೆರವಣಿಗೆ ತೆರಳಿ ದೇವಾಲಯದಲ್ಲಿ ದೇವರಿಗೆ ಮಹಾಪೂಜೆ ಇನ್ನಿತರ ದೇವರ ಸೇವೆಗಳು ಜರುಗಿ ಪ್ರಸಾದ ವಿತರಣೆಯ ಮಾಡಲಾಯಿತು.ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಾಲಯದ ಪ್ರಮುಖರಾದ ಎಡಿಕೇರಿ ಪ್ರವೀಣ್,(ಪವಿ) ದೇವರ ಮುಖ್ಯ ಪೂಜಾರಿ ಬೈತಡ್ಕ ಡೆಲ್ವಿ ದೇವಯ್ಯ, ಅಣ್ಣಿ ಗಣಪತಿ , ಸೋನಾಜಿತ್, ಸೂದನ ಮಧು, ಬೈತಡ್ಕ ಜೀವನ್, ಜಿಲ್ಲು, ಹಿರಿಯರಾದ ಬೈತಡ್ಕ ದೇವಯ್ಯ , ಚಿನ್ನಪ್ಪ, ಕುಟ್ಟಪ್ಪ, ಪುದಿಯನೆರವವನ ಮೋಹನ್ ಪೊನ್ನಪ್ಪ, ದಿಲೀಪ್, ಅಶೋಕ, ಅಜಿತ್, ದಿನೇಶ್, ಸೂದನ, ಮದನ್, ಈರಪ್ಪ, ಅಚ್ಚುಡ ಗಣೇಶ, ಚಿಕ್ಕನ ದಿನೇಶ್ ಸೇರಿದಂತೆ ಊರ ಮತ್ತು ಪರವೂರಿನ ಭಕ್ತಾದಿಗಳು ಪಾಲ್ಗೊಂಡರು.