ಸಾರಾಂಶ
ಸಂವಿಧಾನದ ಶಕ್ತಿಆರೆಸ್ಸೆಸ್‌ಗೆ ಅರಿವುಆರೆಸ್ಸೆಸ್ ಸಂಘಟನೆಗೆ ಈಗ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ. ಸಂವಿಧಾನ, ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದ ಆರೆಸ್ಸೆಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ.- ಪ್ರಿಯಾಂಕ್ ಖರ್ಗೆ, ಸಚಿವ
--ಕನ್ನಡಪ್ರಭ ವಾರ್ತೆ ಕಲಬುರಗಿರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದ್ದ, ಇಡೀ ರಾಜ್ಯದ ಗಮನ ಸೆಳೆದು ಪ್ರತಿಷ್ಠೆಯಾಗಿ ಪರಿಣಮಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಆರೆಸ್ಸೆಸ್ ಪಥ ಸಂಚಲನಕ್ಕೆ ಕೊನೆಗೂ ಹೈಕೋರ್ಟ್‌ನಿಂದ ಅನುಮತಿ ಸಿಕ್ಕಿದೆ.
ನ.16ರ ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಗಣವೇಷಧಾರಿಗಳ ಪಥ ಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧವಾಗಿ ಅನುಮತಿಸಿದೆ. ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಏಕ ಸದಸ್ಯ ನ್ಯಾಯ ಪೀಠವು ಆರೆಸ್ಸೆಸ್ ಪಥ ಸಂಚಲನದಲ್ಲಿ 300 ಮಂದಿ ಗಣವೇಷಧಾರಿಗಳಿಗೆ ಹಾಗೂ 50 ಮಂದಿ ಘೋಷ್ ವೃಂದ (ಬ್ಯಾಂಡ್ ಪಡೆ)ಗೆ ಪಾಲ್ಗೊಳ್ಳಲು ಅವಕಾಶ ನೀಡಿತು.ಕಳೆದ ಅ.19ರಂದು ಆರೆಸ್ಸೆಸ್ ಚಿತ್ತಾಪುರದಲ್ಲಿ ಸಂಘದ ಶತಾಬ್ದಿ ಸಂಭ್ರಮಾಚರಣೆ ನಿಮಿತ್ತ ಪಥ ಸಂಚಲನಕ್ಕೆ ಮುಂದಾದಾಗ ಅಲ್ಲಿನ ತಹಸೀಲ್ದಾರ್ ಕಾನೂನು- ಸುವ್ಯವಸ್ಥೆ ಕಾರಣ ಮುಂದೊಡ್ಡಿ ಅನುಮತಿ ನಿರಾಕರಿಸಿದ್ದರು. ತಹಶೀಲ್ದಾರರ ಈ ಕ್ರಮವನ್ನು ಪ್ರಶ್ನಿಸಿ ಆರೆಸ್ಸೆಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್ ಹೈಕೋರ್ಟ್ ಮೊರೆ ಹೋಗಿದ್ದರು.
---ಈಗ ಹೇಗೆ ನಗ್ತೀದ್ದೀರಿ
ಎಲ್ರೂ: ನ್ಯಾ.ಕಮಲ್ಕಲಬುರಗಿ ಹೈಕೋರ್ಟ್‌ನಲ್ಲಿ ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರು, ಪ್ರಕರಣದಲ್ಲಿ ಪರಸ್ಪರ ಶಾಂತಿ ಹಾಗೂ ಸಂಯಮದ ವಾತಾವರಣ ಮೂಡಿಸುವಲ್ಲಿ ಸಹಕರಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಸಂಘದ ಪರ ವಕೀಲರಾದ ಅರುಣ ಶ್ಯಾಮ್, ಕಾಲ್ಡೂರು ಸತ್ಯನಾರಾಯಣ ಆಚಾರ್ ಅವರ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
‘ಈಗ ನೋಡಿ ಎಲ್ಲರ ಮೊಗದಲ್ಲಿ ನಗೆ ಹೇಗಿದೆ’ ಎಂದು ನ್ಯಾಯಮೂರ್ತಿ ಕಮಲ್ ಹೇಳಿದ ಮಾತುಗಳು ಕೋರ್ಟ್ ಹಾಲ್‌ನಲ್ಲಿದ್ದವರ ಗಮನ ಸೆಳೆಯಿತು. ಇದಕ್ಕೆ ಪ್ರತಿಯಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಹಾಗೂ ಸಂಘದ ಪರ ವಕೀಲರಾದ ಅರುಣ ಶ್ಯಾಮ್, ಕಾಲ್ಡೂರು ಸತ್ಯನಾರಾಯಣ ಆಚಾರ್ ಸುಸೂತ್ರ ವಿಚಾರಣೆಗಾಗಿ ನ್ಯಾಯಮೂರ್ತಿಗಳನ್ನು ಅಭಿನಂದಿಸಿದರು.--
++++ವಿಚಾರಣೆ ನಡೆಸಿದ್ದ ಹೈಕೋರ್ಟ್ ಸೂಚನೆಯಂತೆ ಆರೆಸ್ಸೆಸ್ ಮತ್ತೆ ನ.2ಕ್ಕೆ ಅನುಮತಿ ಕೋರಿತ್ತು. ಏತನ್ಮಧ್ಯೆ ಭೀಮ್ ಆರ್ಮಿ, ದಲಿತ ಪ್ಯಾಂಥರ್ ಸೇರಿದಂತೆ 11 ಸಂಘಟನೆಗಳು ಅದೇ ದಿನಾಂಕದಂದು ಪಥ ಸಂಚಲನ, ಹೋರಾಟ ನಡೆಸುವುದಾಗಿ ಘೋಷಿಸಿ ಜಿಲ್ಲಾಡಳಿತಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದವು. ಈ ಪ್ರಕರಣವು ಇನ್ನುಮುಂದೆ ಬರಬಹುದಾದ ಇಂತಹದ್ದೇ ಘಟನೆಗಳಿಗೆ ಮಾರ್ಗಸೂಚಿ ಆಗುವಂತೆ ಬಗೆಹರಿಸಲು ನ್ಯಾಯಾಲಯ ಆಶಯ ವ್ಯಕ್ತಪಡಿಸಿ ಶಾಂತಿ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದಂತೆ ಅ.30ರಂದು ಡೀಸಿ ನಡೆಸಿದ್ದ ಸಭೆ ಗೊಂದಲಗಳೊಂದಿಗೆ ಮುಕ್ತಾಯವಾಗಿತ್ತು. ಮತ್ತೆ ಹೈಕೋರ್ಟ್, ಅಡ್ವೋಕೆಟ್ ಜನರಲ್ ಶಶಿಕಿರಣ ಶೆಟ್ಟಿ ಅವರ ನೇತೃತ್ವದಲ್ಲಿ ಸಭೆ ನಡೆಸುವಂತೆ ಸೂಚಿಸಿತ್ತು. ಅದರಂತೆ ನ.5ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್, ನ.13 ಅಥವಾ ನ.16ರಂದು ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿತ್ತು. ನ.7ರಂದು ವಿಚಾರಣೆ ನಡೆಸಿದ ಪೀಠವು ಸರ್ಕಾರವು ಸ್ಪಷ್ಟ ನಿಲುವು ತಿಳಿಸುವಂತೆ ಸೂಚಿಸಿ ನ.13ಕ್ಕೆ ವಿಚಾರಣೆ ಮುಂದೂಡಿತು. ಅದರಂತೆ ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ಆರ್‌ಎಸ್‌ಎಸ್‌ಗೆ ನ.16ರಂದು ಪಥ ಸಂಚಲನಕ್ಕೆ ಷರತ್ತಿನೊಂದಿಗೆ ಅನುಮತಿ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಪಥ ಸಂಚಲನದ ಸಾಲುಗಳಲ್ಲಿನ ಬದಲಾವಣೆ, ಮಾರ್ಗ ಇತ್ಯಾದಿಗಳನ್ನು ಸ್ಥಳೀಯ ಆಡಳಿತ ಸೂಚಿಸಿದಂತೆ ಷರತ್ತು ಬದ್ದವಾಗಿ ಪಥ ಸಂಚಲ ನಡೆಸುವಂತೆ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.--
;Resize=(128,128))
;Resize=(128,128))
;Resize=(128,128))