ವೃದ್ಧಾಪ್ಯದಲ್ಲಿ ಖುಷಿಯಲ್ಲಿರಲು ತಮ್ಮ ದಿನಚರಿಯನ್ನು ಸರಿಯಾಗಿ ಸೆಟ್ ಮಾಡಿಕೊಳ್ಳಿ, ನಿಯಮಿತ ಆಹಾರ ಲಘು ವ್ಯಾಯಾಮ ಸರಿಯಾಗಿರಲಿ

ಕೊಪ್ಪಳ: ಹಿರಿಯರು ಮುಂಬರುವ ಪೀಳಿಗೆಗೆ ದಾರಿದೀಪ, ಹಿರಿಯರ ಸೇವೆ ಕಿರಿಯರ ಆದ್ಯ ಕರ್ತವ್ಯ ಹಿರಿಯರನ್ನು ಆರೈಕೆ ಮಾಡುವವರು ಸಮಾಜಕ್ಕೆ ಒಂದು ಆದರ್ಶ ಇದು ಒಂದು ಪುಣ್ಯಕಾರ್ಯ ಪವಿತ್ರ ಕಾರ್ಯ ಎಂದು ಡಾ.ಬಿ.ಕೆ.ಮಹೇಶ ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ ಹಿರಿಯ ನಾಗರಿಕರ ಆರೈಕೆದಾರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೃದ್ಧಾಪ್ಯದಲ್ಲಿ ಖುಷಿಯಲ್ಲಿರಲು ತಮ್ಮ ದಿನಚರಿಯನ್ನು ಸರಿಯಾಗಿ ಸೆಟ್ ಮಾಡಿಕೊಳ್ಳಿ, ನಿಯಮಿತ ಆಹಾರ ಲಘು ವ್ಯಾಯಾಮ ಸರಿಯಾಗಿರಲಿ. ಮೊಬೈಲ್ ಬಳಕೆ ಕಡಿಮೆ ಇರಲಿ, ನಿದ್ರೆ ಚೆನ್ನಾಗಿ ಮಾಡಿ ಅಧ್ಯಾತ್ಮ ಜ್ಞಾನ ಮತ್ತು ಮೆಡಿಟೇಶನ್ ಜೀವನದಲ್ಲಿ ಕಾಯಂ ಇಟ್ಟುಕೊಳ್ಳಿ ಎಂದು ಕಿವಿ ಮಾತು ತಿಳಿಸಿದರು.

ಅಧ್ಯಾತ್ಮ ಜ್ಞಾನ ಪ್ರತಿನಿತ್ಯ ಕೇಳುವುದರಿಂದ ನಕಾರಾತ್ಮಕ ವಿಚಾರಗಳು ನಕಾರಾತ್ಮಕ ಭಾವನೆ ದೂರವಾಗಿ ಮನಸ್ಸು ಖುಷಿಯಲ್ಲಿರಲು ಸಾಧ್ಯ ಎಂದರು ಮೆಡಿಟೇಶನ್ ಎಂದರೆ ಮನುಷ್ಯನ ಮನಸ್ಸನ್ನು ಸಕಾರಾತ್ಮಕತೆಯ ಕಡೆಗೆ ಕೊಂಡೊಯ್ಯುವ ಮಾರ್ಗ ಎಂದರು.

ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಮಾತನಾಡಿ, ಹಿರಿಯ ನಾಗರಿಕರು ಅನುಭವದ ಗಣಿ ಅವರ ಮಾರ್ಗದರ್ಶನ ಇಂದಿನ ಪೀಳಿಗೆಗೆ ಅತ್ಯಗತ್ಯ ವೃದ್ಧಾಪ್ಯದಲ್ಲಿ ಹಿರಿಯರನ್ನು ಆರೈಕೆ ಮಾಡುತ್ತಿರುವವರನ್ನು ಪರಮಾತ್ಮನ ಸ್ಥಾನದಲ್ಲಿ ಸನ್ಮಾನ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಹಿರಿಯ ನಾಗರಿಕರ ಆರೈಕೆದಾರರಿಗೆ ಪರಮಾತ್ಮ ಇನ್ನಷ್ಟು ಶಕ್ತಿ ಆರೋಗ್ಯ ಆಶೀರ್ವಾದ ನೀಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸುಮಂಗಲ ಹಂಚಿನಾಳ ರಾಜೇಶ್ವರಿ, ಶಾಂತಯ್ಯ, ಶಾಂತಪ್ಪ, ಕೋಮಲ ಕುದರಿ ಮೋತಿ, ಮಾಲ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಆರೈಕೆದಾರರನ್ನು ಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಸ್ನೇಹಕ್ಕ ಸ್ವಾಗತಿಸಿ ವಂದಿಸಿದರು.