ಗೀತೆಯಲ್ಲಿ ಸಾರ್ವಕಾಲಿಕ ಸತ್ಯವಾದ ಸಂದೇಶಗಳಿವೆ. ಅದನ್ನು ವಿಶ್ವಕ್ಕೆ ಸಂದೇಶ ತಿಳಿಸಬೇಕು ಎನ್ನುವ ಉದ್ದೇಶದಿಂದ ಪರ್ಯಾಯದ ಅವಧಿಯಲ್ಲಿ ಕೋಟಿ ಗೀತ ಲೇಖನ ಯಜ್ಞವನ್ನು ಆರಂಭಿಸಲಾಯಿತು. ಮುಂದಿನ ಪರ್ಯಾದ ವರೆಗೂ ಇದು ಮುಂದುವರಿಯಲಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರು: ಗೀತೆಯಲ್ಲಿ ಸಾರ್ವಕಾಲಿಕ ಸತ್ಯವಾದ ಸಂದೇಶಗಳಿವೆ. ಅದನ್ನು ವಿಶ್ವಕ್ಕೆ ಸಂದೇಶ ತಿಳಿಸಬೇಕು ಎನ್ನುವ ಉದ್ದೇಶದಿಂದ ಪರ್ಯಾಯದ ಅವಧಿಯಲ್ಲಿ ಕೋಟಿ ಗೀತ ಲೇಖನ ಯಜ್ಞವನ್ನು ಆರಂಭಿಸಲಾಯಿತು. ಮುಂದಿನ ಪರ್ಯಾದ ವರೆಗೂ ಇದು ಮುಂದುವರಿಯಲಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಭಾನುವಾರ ಕದ್ರಿಕಂಬಳದ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದಲ್ಲಿ ಆಯೋಜಿಸಲಾದ ‘ಗೀತಾ ದಿಗ್ವಿಜಯ‘ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಭಗವದ್ಗೀತೆ ನಮ್ಮ ಜೀವನಕ್ಕೆ ಮಾರ್ಗದರ್ಶಕ ಗ್ರಂಥ. ನಾವು ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕು ಎನ್ನುವುದನ್ನು ಅದರಲ್ಲಿ ವಿವರವಾಗಿ ತಿಳಿಸಲಾಗಿದೆ. ಭಗವದ್ಗೀತೆಯ ಸಾರ, ಸಂದೇಶದಂತೆ ನಡೆದರೆ ಜೀವನ ಸಾರ್ಥಕವಾಗಲಿದೆ. ಇಂದು ದೇಶದಲ್ಲಿ ಬಡತನ ಕಡಿಮೆಯಾಗಿದ್ದರೂ, ಬೌದ್ಧಿಕ ದಾರಿದ್ರ್ಯ ಹೆಚ್ಚಾಗುತ್ತಿದೆ. ಗೀತೆಯ ಸಂದೇಶ ಪ್ರತಿಯೊಬ್ಬರಿಗೂ ಸಿಕ್ಕಾಗ ಅದೂ ನಿವಾರಣೆಯಾಗಲು ಸಾಧ್ಯ ಜತೆಗೆ ಆಂತರಿಕ ಶ್ರೀಮಂತಿಕೆಯನ್ನು ಪಡೆಯಲು ಸಾಧ್ಯ ಎಂದರು.ಭಗವದ್ಗೀತೆಯನ್ನು ಕಲಿಸುತ್ತಿರುವ ಗುರುಗಳಿಗೆ ‘ಕಲ್ಕೂರ ಭಗವದ್ಗೀತ ಸಿರಿ‘ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು. ಭಗವದ್ಗೀತೆ ಕಂಠ ಪಾಠ ಮಾಡಿದವರನ್ನು ಗೌರವಿಸಲಾಯಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವಿಕದಲ್ಲಿ, ಪುತ್ತಿಗೆ ಸ್ವಾಮೀಜಿಯವರು ವಿಶ್ವಕ್ಕೆ ಗೀತೆಯ ಸಂಭ್ರಮವನ್ನು ಪಸರಿಸುತ್ತಿದ್ದಾರೆ. ಪರ್ಯಾಯದ ಅವಧಿಯಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ಎಲ್ಲೆಲ್ಲೂ ಗೀತೆಯ ಸಂಭ್ರಮವಿತ್ತು. ಪ್ರಧಾನ ಮಂತ್ರಿ ಮೋದಿಯವರನ್ನು ಕೂಡಾ ಕೃಷ್ಣ ಉಡುಪಿಗೆ ಕರೆಸಿಕೊಂಡಿದ್ದಾನೆ. ಸನಾತನದ ಸಂಸ್ಕೃತಿಯ ಪುನರುಸ್ಥಾನದ ಪ್ರಜ್ವಲತೆ ಶ್ರೀಗಳ ಪರ್ಯಾಯದ ಅವಧಿಯಲ್ಲಿ ಆಯಿತು ಎಂದರು.ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಪ್ರಮುಖರಾದ ಪ್ರಭಾಕರ ಅಡಿಗ, ಕರ್ನಲ್ ಪ್ರಭಾಕರ್, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಜನಾರ್ದನ ಹಂದೆ, ಜಿ.ಕೆ. ಭಟ್ ಸೇರಾಜೆ, ಪೊಳಲಿ ನಿತ್ಯಾನಂದ ಕಾರಂತ ಮತ್ತಿತರರು ಇದ್ದರು.