ಇಂದು ಹಿಂದೂ ಮಹಾಗಣಪತಿ ಗಣೇಶ ವಿಸರ್ಜನೆ

| Published : Sep 15 2024, 01:46 AM IST

ಸಾರಾಂಶ

ಜಿಲ್ಲೆಯ ಪ್ರಸಿದ್ಧಿ ಪಡೆದ ಮಾತೃ ಭೂಮಿ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸಿದ ಹಿಂದೂ ಮಹಾ ಗಣಪತಿಯ ಗಣೇಶ ವಿಸರ್ಜನಾ ಮೆರವಣಿಗೆ ಸೆ.15ರಂದು ನಡೆಯಲಿದೆ ಎಂದು ಸಮಿತಿಯ ಸದಸ್ಯರಾದ ಅಶೋಕ ಲಿಂಬಾವಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಪ್ರಸಿದ್ಧಿ ಪಡೆದ ಮಾತೃ ಭೂಮಿ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸಿದ ಹಿಂದೂ ಮಹಾ ಗಣಪತಿಯ ಗಣೇಶ ವಿಸರ್ಜನಾ ಮೆರವಣಿಗೆ ಸೆ.15ರಂದು ನಡೆಯಲಿದೆ ಎಂದು ಸಮಿತಿಯ ಸದಸ್ಯರಾದ ಅಶೋಕ ಲಿಂಬಾವಳಿ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃಭೂಮಿ ಯುವಕ ಮಂಡಳಿ ಸತತ 11ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭವ್ಯ ಶೋಭಾಯಾತ್ರೆ ಜರುಗಲಿದೆ ಎಂದರು.

ಭಾರತೀಯ ಸಂಸ್ಕೃತಿಯ ಪ್ರತೀಕ ವಾಧ್ಯಗಳ ತಂಡಗಳನ್ನು ಕರೆಸುತ್ತಿದ್ದೇವೆ. ಈ ಮೊದಲು ಸೋಲಾಪೂರ, ಕೊಲ್ಹಾಪುರದಿಂದ ಡೋಲ್ ತಾಷಾ ಪಥಕ್ ಕರೆಸಲಾಗಿತ್ತು. ಈ ಬಾರಿ ಸಾಂಗ್ಲಿಯ 130 ಜನ ಯುವಕ, ಯುವತಿಯರೊಳಗೊಂಡ ಡೋಲ್ ತಾಷಾ ಪಥಕ್ ತಂಡ ಬರಲಿದೆ. ಉಡುಪಿಯ 30 ಕಲಾ ತಂಡದಿಂದ ಚಂಡಿ ವಾದನ, ಪ್ರಥಮ ಬಾರಿಗೆ ಮಂಗಳೂರಿನ ಓಂಕಾರ ಕುಣಿತ ಭಜನಾ ಮಂಡಳಿಯಿಂದ ಮೆರವಣಿಗೆ ನಡೆಯಲಿದೆ ಎಂದರು.

ನಗರದ ಕಟ್ಟಿ ಆಸ್ಪತ್ರೆಯಿಂದ ಮಧ್ಯಾಹ್ನ 2.30ಕ್ಕೆ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಶೋಭಾ ಯಾತ್ರೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಡಾ.ಶಂಕರ ಪಾಟೀಲ, ಡಾ.ಕಟ್ಟಿ ಅವರು ಚಾಲನೆ ನೀಡುವರು. ಮೆರವಣಿಗೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಂದು ರಾಮವಾಡಗಿ, ಸುನೀಲ, ವಿಶ್ವನಾಥ ವೈಜಾಪೂರ, ಪ್ರಕಾಶ ನಿರಂಜನ, ನಾಗಯ್ಯ ಮಠಪತಿ, ವಿರೇಶ ಬಿಜಾಪೂರ ಉಪಸ್ಥಿತರಿದ್ದರು.