ಸಾರಾಂಶ
ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದರೂ, ಬುಧವಾರದ ಆಯಧಪೂಜೆಗೆ ಜನರು ವಸ್ತುಗಳನ್ನು ಖರೀದಿಸುತ್ತಿದ್ದದು ಮಾರುಕಟ್ಟೆಯಲ್ಲಿ ಕಂಡುಬಂದಿತು.
ಚಾಮರಾಜನಗರ: ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದರೂ, ಬುಧವಾರದ ಆಯಧಪೂಜೆಗೆ ಜನರು ವಸ್ತುಗಳನ್ನು ಖರೀದಿಸುತ್ತಿದ್ದದು ಮಾರುಕಟ್ಟೆಯಲ್ಲಿ ಕಂಡುಬಂದಿತು.
ಜನರು ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ದತೆಯಲ್ಲಿ ತೊಡಗಿದ್ದರು. ಬಾಳೆಹಣ್ಣು ಸೇವಂತಿಗೆ ಬಿಳಿ ಹೂ ಕನಕಾಂಭರ, ಬೂದುಗುಂಬಳ, ಬಾಳೆಕಂಭ ಬೆಲೆ ಏರಿಕೆ, ಇನ್ನು ಅಲಂಕಾರಿಕ ವಸ್ತುಗಳು, ಬಂಟಿಂಗ್ಸ್‌ಗಳು ಅವುಗಳ ಅಂದಕ್ಕೆ ತಕ್ಕಂತೆ ಬೆಲೆ ಏರಿಕೆಯಾಗಿದ್ದವು.ಬುಧವಾರ ಬೆಳಗಿನ ಅಯಧಪೂಜೆಗೆ ಜನರು ಮಂಗಳವಾರ ಬೆಳಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ರಥದ ಬೀದಿಯಲ್ಲಿ ಮುಗಿಬಿದ್ದರು.ಇನ್ನು ಸ್ವೀಟ್‌ಸ್ಟಾಲ್‌ಗಳಲ್ಲಿ ಸಿಹಿ ಪದಾರ್ಥಗಳಾದ ಬೂಂದಿ, ಜುಲಾಬಿ, ಜಾಂಗೀರ್, ಮೈಸೂರು ಪಾಕ್, ಬಾದುಶ, ಬರ್ಪಿ, ಲಾಡುಗಳ ವ್ಯಾಪಾರದ ಭರಾಟೆಯು ಬಲು ಜೋರಾಗಿತ್ತು.ನಾಳೆ ಸರ್ಕಾರಿ ರಜೆಯಾದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಮಂಗಳವಾರವೇ ಸಾಯಂಕಾಲವೇ ಆಯುಧ ಪೂಜೆ ನೆರವೇರಿಸಿ, ವಾಹನಗಳಿಗೆ ಪೂಜೆ ನೆರವೇರಿಸಲಾಯಿತು.ಗ್ಯಾರೇಜ್‌ಗಳಲ್ಲಿ ವಾಹನಗಳ ಸಣ್ಣಪುಟ್ಡ ರಿಪೇರಿ, ವಾಹನಗಳ ಕ್ಲೀನಿಂಗ್, ಸೈಕಲ್ ಷಾಪ್‌ಗಳಲ್ಲಿ ಮಕ್ಕಳು ತಮ್ಮ ಸೈಕಲ್‌ಗಳನ್ನು ರಿಪೇರಿ ಮಾಡಿಸುತ್ತಿದ್ದದು ಕಂಡು ಬಂತು.ಒಂದು ದ್ವಿಚಕ್ರ ವಾಹನ ಪೂಜೆ ಮಾಡಲು ಕನಿಷ್ಠ 500 ರು. ಆದರೂ ಬೇಕು ಎಂದು ಗ್ರಾಹಕರೊಬ್ಬರು ಹೇಳುತ್ತಿದ್ದರು.