ಸನ್ನಡತೆ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ 14 ಕೈದಿಗಳ ಬಿಡುಗಡೆ

KannadaprabhaNewsNetwork |  
Published : Mar 14, 2026, 03:45 AM IST
Jail 1 | Kannada Prabha

ಸಾರಾಂಶ

ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 14 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೇ ರೀತಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ 16 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 14 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೇ ರೀತಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ 16 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸನ್ನಡತೆಯ ಮೇಲೆ ಬಿಡುಗಡೆಯಾದವರಿಗೆ ಕಾರಾಗೃಹ ಡಿಜಿಪಿ ಅಲೋಕ್‌ ಕುಮಾರ್‌ ಅವರು ಹೂವು ಹಾಗೂ ಸಿಹಿ ಕೊಟ್ಟು ಸನ್ನಡತೆಯಿಂದ ಬದುಕುವಂತೆ ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಅಲೋಕ್ ಕುಮಾರ್, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 14 ಕೈದಿಗಳ ಬಿಡುಗಡೆಯಾಗಿದ್ದಾರೆ. ಅವರಿಗೆ ಎಲ್ಲಾ ರೀತಿಯ ಬುದ್ಧಿ ಮಾತುಗಳನ್ನು ಹೇಳಲಾಗಿದೆ. ಅವರ ಉದ್ಯೋಗಕ್ಕೂ ಕೂಡ ನಮ್ಮ ಕಡೆಯಿಂದ ಸಹಾಯ ಮಾಡುತ್ತೇವೆ. ಒಂದು ವರ್ಷ ಅವರ ಎಲ್ಲಾ ಚಲನವಲನಗಳ ಮೇಲೆ ನಿಗಾ ವಹಿಸಲಾಗುತ್ತದೆ ಹಾಗೂ ಅವರ ಸಂಬಂಧಿಕರ ವಾಟ್ಸಪ್ ಗ್ರೂಪ್ ಮಾಡಲಾಗಿದೆ. ಅವರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅದರಲ್ಲಿ ಮಾಹಿತಿ ಪಡೆದುಕೊಳ್ಳುತ್ತೇವೆ. ಜತೆಗೆ ಸ್ಥಳೀಯ ಠಾಣೆಗೂ ಕೂಡ ಮಾಹಿತಿ ನೀಡಲಾಗಿದೆ. ಘಟಕಾಧಿಕಾರಿಗಳು ಅವರ ಮೇಲೆ ನಿಗಾ ವಹಿಸಿರುತ್ತಾರೆ. ಅವರು ಒಳ್ಳೆಯ ಜೀವನ ನಡೆಸಬೇಕು ಎಂಬ ಆಶಯ ನಮ್ಮದು. ಅವರ ಊರಿನ ಮುಖಂಡರೊಂದಿಗೂ ಮಾತುಕತೆ ನಡೆಸಿದ್ದೇವೆ. ಗೌರವಯುತವಾಗಿ ಅವರನ್ನು ನಡೆಸಿಕೊಳ್ಳುವಂತೆ ತಿಳಿಸಲಾಗಿದ್ದು, ಸಮಾಜದಲ್ಲಿ ಅವರು ಒಳ್ಳೆಯ ರೀತಿ ಜೀವನ ನಡೆಸುವ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು. ಬಿಡುಗಡೆಯಾದವರು:

ಶ್ರೀನಿವಾಸ್, ಬಾಲರಾಜು, ವೆಂಕಟೇಶ್, ರಂಜಿತ್, ಭುವನೇಶ, ಛತ್ರಪತಿ ನಾಯ್ಕ, ಶ್ರೀನಿವಾಸ್‌ ಮೂರ್ತಿ, ಲಿಂಗರಾಜು, ಯಮನಪ್ಪ, ನೀಲಕಂಠಾಚಾರ್, ಬಾಬು, ರಾಜಾಚಾರಿ, ನಾರಾಯಣಗೌಡ ಮತ್ತು ವೆಂಕಟೇಶ್.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳಿಗೆ ಜಾಮೀನು
ಪುತ್ರನ ಸಮಯ ಪ್ರಜ್ಞೆಯಿಂದ 6 ತಾಸು ಡಿಜಿಟಲ್‌ ಅರೆಸ್ಟ್‌ ಆಗಿದ್ದ ತಂದೆ ಅಕ್ರಮದಿಂದ ಪಾರು